ಮಳೆ ನೀರು ರಸ್ತೆಲಿ ನಿಂತು ವಾಹನ ಸವಾರರ ಪರದಾಟ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ಅತ್ಯಂತ ವೇಗವಾಗಿ ಅಭಿವೃದ್ಧಿ ಆಗ್ತಿರುವ ಪ್ರದೇಶ. ಆದರೆ ಮೂಲಭೂತ ಸೌಲಭ್ಯ ಗಳಾದ ರಸ್ತೆ ಚರಂಡಿ ಮೋರಿಗಳು ಇನ್ನಷ್ಟು ಶುದ್ಧ ಆಗಬೇಕು. ವಿಪರ್ಯಾಸವೆಂಬಂತೆ ಹೊಸಕೋಟೆಯ ಚಿಕ್ಕಕೆರೆ ಕೋಡಿಯ ಒಂದು ಭಾಗದ ಮೋರಿ ಹೂಳು ಮತ್ತು ಕಸಕಡ್ಡಿ ತುಂಬಿ ಬ್ಲಾಕ್ ಆಗಿದೆ. ಪರಿಣಾಮ ಚರಂಡಿ ನೀರು ಮೋರಿಯಲ್ಲಿ ಹರಿಯದೆ ಇಳಿಜಾರಿನ ರಸ್ತೆಯಲ್ಲಿ ಎರಡು ಅಡಿ ನೀರು ನಿಂತು ವಾಹನ ಸವಾರರು ಪರದಾಡ್ತಿದ್ದಾರೆ. ಹೊಸೂರು- ಸರ್ಜಾಪುರ- ಹೊಸಕೋಟೆ- ದೇವನಹಳ್ಳಿ- ದೊಡ್ಡಬಳ್ಳಾಪುರಕ್ಕೆ ಈ ರಸ್ತೆ ಯೆ ಸಂಪರ್ಕ ಕೊಂಡಿ. ಆದರೆ ಈ ಹೊಸಕೋಟೆ ಉಪ್ಪಾರಹಳ್ಳಿ ಇಳಿಜಾರು ರಸ್ತೆ ಮಾತ್ರ ನೀರು ತುಂಬಿ ಜನರ ನೆಮ್ಮದಿ ಕೆಡಿಸಿದೆ.