ಈ ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆ: ಕರ್ನಾಟಕದ ಮುಂದಿನ ಒಂದು ವಾರದ ಹವಾಮಾನ ವರದಿ

Krishnaveni K

ಬುಧವಾರ, 15 ಮೇ 2024 (09:12 IST)
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆ ಮುಂದುವರಿದಿದೆ. ಮುಂದಿನ ಒಂದು ವಾರ ಕಾಲ ಮಳೆ ಇನ್ನಷ್ಟು ತೀವ್ರವಾಗಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಕರ್ನಾಟಕದ ಇತರೆಡೆಯೂ ಮೊನ್ನೆಯಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಇಡೀ ರಾಜ್ಯದಲ್ಲಿ ತಾಪಮಾನ ಕೊಂಚ ಮಟ್ಟಿಗೆ ತಗ್ಗಿದೆ. ಇದೀಗ ಇನ್ನೂ ಒಂದು ವಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳಿದೆ.

ಮುಂದಿನ ಒಂದು ವಾರ ಬೆಂಗಳೂರು ಮಾತ್ರವಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಜೋರಾಗಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ರಾತ್ರಿ ಮಳೆಯಾಗುವ ಸಂಭವವಿದೆ. ಮೊನ್ನೆಯಿಂದ ರಾತ್ರಿ ಮಳೆಯಾಗುತ್ತಿದೆ.

ಇಂದು ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನ 32 ಡಿಗ್ರಿಯಿರಲಿದೆ. ಕನಿಷ್ಠ ತಾಪಮಾನ 22 ಡಿಗ್ರಿಯಿರಲಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಟ್ಟಿಗೆ ಸಾಧಾರಣ ಮಳೆಯಾಗಲಿದೆ. ಶುಕ್ರವಾರದಿಂದ ಮಳೆ ಹೆಚ್ಚಾಗಲಿದೆ. ಇದು ಮುಂದೆ ನಾಲ್ಕೈದು ದಿನಗಳವರೆಗೆ ಮುಂದುವರಿಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ