ಬೀದಿ ಬದಿ ವ್ಯಾಪಾರಿಗಳಿಗೆ ತಲೆನೋವಾದ ಮಳೆರಾಯ…!

ಸೋಮವಾರ, 22 ಮೇ 2023 (19:19 IST)
ಮಳೆಯಿಂದಾಗಿ ಜನರ ಜೀವನ ಸಂಪೂರ್ಣ ಅದಗೆಟ್ಟಿದೆ.. ಒಂದೆಡೆ ರಸ್ತೆ ಗುಂಡಿ ಗಳಲ್ಲಿ ನೀರು ತುಂಬಿ ವಾಹನ ಸವಾರರರಿಗೆ ತಲೆನೋವಾದ್ರೆ, ಮತ್ತೊಂದೆಡೆ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಜಾಗ ಇಲ್ಲದೆ, ಗ್ರಾಹಕರು ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನು ಮುಂದಿನ ನಾಲ್ಕು ದಿನಗಳ ಪೈಕಿ ಕೊನೆಯ ಎರಡು ದಿನಗಳ ಕಾಲ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯೆತೆಯಿದೆ. ಈ ವೇಳೆ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಮಳೆ ಆಗುವ ಸೂಚನೆಯನ್ನೂ ನೀಡಿದೆ.ಒಟ್ಟಿನಲ್ಲಿ ರಾಜ್ಯದ ಹಲವೆಡೆ ಈಗಾಗಲೇ ಮಳೆರಾಯನ ಆರ್ಭಟದಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಇದಕ್ಕೆ ಸರ್ಕಾರ ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ