ರಾಜ್ಯದಲ್ಲಿ ಮುಂದುವರಿಯಲಿದೆ ವರುಣನ ಆರ್ಭಟ

ಸೋಮವಾರ, 22 ಮೇ 2023 (18:56 IST)
ರಾಜಧಾನಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ನೆನ್ನೆ ರಾಜಧಾನಿಯಲ್ಲಿ ಆಣೆಕಲ್ಲು ಸಹಿತ ಮಳೆಯಾಗಿದೆ , ಇದರಿಂದ ಜನಸಾಮಾನ್ಯರಿಗೆ ತುಂಬಲಾರದ ನಷ್ಟವಾಗಿದೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳು ಗಳಿಂದ ವರುಣನ ಆರ್ಭಟ ಜೋರಾಗಿದೆ…ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದು, ನೆನ್ನೆ ಅಷ್ಟೇ ಈ ವರ್ಷದ ಮಳೆಗೆ ಕೆ. ಆರ್ ಸರ್ಕಲ್ ನ ಅಂಡರ್ ಪಾಸ್ ಬಳಿ ಸಿಲುಕಿ ಭಾನು ರೇಖಾ ಎಂಬ ಯುವತಿ ಮೃತ ಪಟ್ಟಿದ್ದಾಳೆ.. ಇಂದು ಕೂಡ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು,ಇನ್ನೂ ಒಂದು ವಾರಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.

ಹೌದು ರಾಜ್ಯದ ಹಲವೆಡೆ ಮುಂದಿನ 4 ದಿನಗಳ ಕಾಲ ಮಳೆರಾಯನ ಆರ್ಭಟ ಜೋರಾಗಲಿದೆ .ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ..ವರುಣನ ಅಬ್ಬರದಿಂದಾಗಿ ಮರಗಳು ನೆಲಕಚ್ಚಿವೆ.. ಅಷ್ಟೇ ಅಲ್ಲ ರಸ್ತೆಯ ಬದಿಗಳಲ್ಲಿ ಎಲ್ಲೇ ನೋಡಿದ್ರು ಮರದ ಕೊಂಬೆಗಳು ರಾರಾಜಿಸ್ತಿವೆ.ನಿನ್ನೇಯೂ ಕೂಡ ನಗರದ ಕಾರ್ಪೋರೇಶನ್, ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ಬಹುತೇಕ ಕಡೆ ಆಣೆಕಲ್ಲು ಮಳೆ ಸುರಿದಿದ್ದು, ಇಂದು ಕೂಡ ಕೆಲವು ಕಡೆ ಮಳೆ ಆಗಲಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ