ಸಿದ್ಧಗಂಗಾ ಶ್ರೀ ಭೇಟಿ ಮಾಡಿದ ರಾಜ್ಯಸಭಾ ಸದಸ್ಯ!
ಅನಾರೋಗ್ಯದಿಂದಿರುವ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳನ್ನು ರಾಜ್ಯಸಭಾ ಸದಸ್ಯ ಭೇಟಿ ಮಾಡಿದ್ದಾರೆ.
ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ತುಮಕೂರು ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿದರು. ಆ ಬಳಿಕ ಹೇಳಿಕೆ ನೀಡಿರುವ ಅವರು, ಶ್ರೀಗಳ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದ್ದೇವೆ. ಅವರ ಮಾತುಗಳು ಸರಿಯಾಗಿ ಕೇಳಿಸಲಿಲ್ಲ ಎಂದರು.
ಸಿದ್ಧಗಂಗಾ ಶ್ರೀ ಅವರಿಗೆ ನಡೆಸಿದ ಅಪರೇಷನ್ ಯಶಸ್ವಿಯಾಗಿದೆ. ಯಾವುದೇ ತೊಂದರೆಯಿಲ್ಲ. ಆಪರೇಷನ್ ಬಳಿಕ ಸೋಂಕು ಕಾಣಿಸಿಕೊಂಡಿತ್ತು. ಸೋಂಕಿಗೂ ಚಿಕಿತ್ಸೆ ನೀಡಲಾಗಿದೆ. ಅವರು ನಿನ್ನೆಯಿಂದ ಚೇತರಿಸಿಕೊಂಡಿದ್ದಾರೆ ಎಂದು
ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿಕೆ ನೀಡಿದ್ದಾರೆ.