ಕೊನೆಯ ಕ್ಷಣದಲ್ಲಿ ಯೂ ಟರ್ನ್ ಹೊಡೆದ ರಾಮಲಿಂಗಾರೆಡ್ಡಿ

ಗುರುವಾರ, 18 ಜುಲೈ 2019 (10:08 IST)
ಬೆಂಗಳೂರು: ಇಷ್ಟು ದಿನ ಅತೃಪ್ತ ಶಾಸಕರ ಜತೆ ಗುರುತಿಸಿಕೊಂಡಿದ್ದ ಹಿರಿಯ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಇದೀಗ ಕೊನೆಯ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದಾರೆ.


ರಾಮಲಿಂಗಾ ರೆಡ್ಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇತರ ಶಾಸಕರಂತೆ ರೆಸಾರ್ಟ್ ಸಲ್ಲಿ ಹೋಗಿ ಬಂಡಾಯದ ಬಾವುಟ ಹಾರಿಸಿರಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ನಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿಕೊಂಡಿದ್ದರು.

ಆದರೆ ವಿಶ್ವಾಸ ಮತ ಯಾಚನೆಗೆ ಒಂದು ದಿನ ಬಾಕಿಯಿರುವಾಗ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿದ್ದು, ರಾಜೀನಾಮೆ ಹಿಂಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ, ಸರ್ಕಾರ ಮತ್ತು ಪಕ್ಷದ ಜತೆಗಿರುವುದಾಗಿ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ