ವಿಶ್ವಾಸ ಮತ ಯಾಚನೆಯೊಂದಿಗೆ ಮುಗಿಯೋದಿಲ್ಲ ರಾಜ್ಯ ರಾಜಕೀಯ ಚದುರಂಗದಾಟ!
ಮತ್ತೆ ಬಿಜೆಪಿ ಬಹುಮತ ಸಾಬೀತಿಗೆ ಶಾಸಕರನ್ನು ಸೆಳೆಯುವ ಯತ್ನ ಮಾಡಬೇಕು. ಆಗ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಲಿದೆ. ಒಂದು ವೇಳೆ ಬಿಜೆಪಿಯೂ ಬಹುತಮ ಸಾಬೀತುಪಡಿಸಲು ವಿಫಲವಾದರೆ ರಾಜ್ಯ ರಾಷ್ಟ್ರಪತಿ ಆಡಳಿತದ ತೆಕ್ಕೆಗೆ ಬಿದ್ದರೂ ಅಚ್ಚರಿಯಿಲ್ಲ. ಹೀಗಾಗಿ ಇಂದಿನ ವಿಶ್ವಾಸ ಮತ ಯಾಚನೆ ಬಳಿಕ ರಾಜಕೀಯ ನಾಟಕದ ಮತ್ತೊಂದು ಅಧ್ಯಾಯದ ಆರಂಭವಾಗುವುದಂತೂ ನಿಶ್ಚಿತ.