ಸುಪ್ರೀಂಕೋರ್ಟ್ ಮಹಾ ತೀರ್ಪು: ಕೋರ್ಟ್ ಹೇಳಿದ ಎರಡು ಖಡಕ್ ವಿಚಾರಗಳು!

ಬುಧವಾರ, 17 ಜುಲೈ 2019 (10:43 IST)
ನವದೆಹಲಿ: ಕರ್ನಾಟಕದ ಬಂಡಾಯ ಶಾಸಕರ ರಾಜೀನಾಮೆ ವಿಚಾರವಾಗಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಹೊರಹಾಕಿದೆ.


ಸ್ಪೀಕರ್ ಸಮಯ ಮಿತಿ ನೀಡದೇ ಶೀಘ್ರದಲ್ಲೇ ರಾಜೀನಾಮೆ ವಿಚಾರ ಇತ್ಯರ್ಥ ಮಾಡಬೇಕು. ರಾಜೀನಾಮೆ ನೀಡಿದ ಶಾಸಕರನ್ನು ಕಲಾಪದಲ್ಲಿ ಭಾಗವಹಿಸಲೇ ಬೇಕು ಎಂದು ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಆದೇಶ ಮಾಡಲಾಗಿದೆ.

ಆದರೆ ಸ್ಪೀಕರ್ ಗೆ ಇಂತಿಷ್ಟೇ ಕಾಲಮಿತಿ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿಲ್ಲ. ಸ್ಪೀಕರ್ ನಿರ್ಧಾರದವರೆಗೂ ಶಾಸಕರನ್ನು ಅಧಿವೇಶನದಲ್ಲಿ ಭಾಗವಹಿಸಲು ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಇದೀಗ ರೆಬಲ್ ಶಾಸಕರು ವಿಪ್ ನ ಒತ್ತಡದಿಂದ ಹೊರಬಿದ್ದಿದ್ದಾರೆ. ಆದರೆ ಅನರ್ಹತೆ ನಿರ್ಧಾರ ಕೈಗೊಳ್ಳುವುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ ಎಂದಿರುವ ಸುಪ್ರೀಂ ಕೋರ್ಟ್ ಸ್ಪೀಕರ್ ಗೆ ನಿರ್ದಿಷ್ಟ ಆದೇಶ ನೀಡಿಲ್ಲ.

ಹೀಗೆ ಎರಡು ಮುಖ್ಯ ವಿಚಾರಗಳನ್ನು ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಸುಪ್ರೀಂಕೋರ್ಟ್ ವಿನಾಕಾರಣ ವಿಳಂಬ ಧೋರಣೆ ಮಾಡುತ್ತಿರುವುದರ ವಿರುದ್ಧ ಆದೇಶ ನೀಡಿದೆ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ