ಕರ್ನಾಟಕದಲ್ಲೂ ಟ್ರಾಫಿಕ್ ದುಬಾರಿ ದಂಡಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ

ಬುಧವಾರ, 11 ಸೆಪ್ಟಂಬರ್ 2019 (11:36 IST)
ಬೆಂಗಳೂರು : ಹೊಸದಾಗಿ ಬಂದಿರುವ ಟ್ರಾಫಿಕ್ ರೂಲ್ಸ್ ಗೆ ಸವಾರರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗುಜರಾತ್ ನಂತರ ಕರ್ನಾಟಕದಲ್ಲೂ ದುಬಾರಿ ದಂಡಕ್ಕೆ ಬ್ರೇಕ್ ಹಾಕುವ ಸಂಭವ ಇದೆ ಎನ್ನಲಾಗಿದೆ.




ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ ಹೊಸ ಟ್ರಾಫಿಕ್ ರೂಲ್ಸ್ ಸವಾರರಿಗೆ ಹೊರೆಯಾದ ಹಿನ್ನಲೆಯಲ್ಲಿ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ದಂಡ ಕಡಿತದ ಕುರಿತು ಚಿಂತನೆ ನಡೆಸಲಿದೆ ಎನ್ನಲಾಗಿದೆ.


ಈ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಮನವಿ ಮಾಡಿದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಸಹಮತ ನೀಡಿದೆ. ಅಲ್ಲದೇ ಕಾನೂನು, ಸಾರಿಗೆ, ಗೃಹ ಇಲಾಖೆಯ ಅಧಿಕಾರಿಗಳು ಎಷ್ಟು ಪ್ರಮಾಣದಲ್ಲಿ ಕಡಿತ ಮಾಡಬೇಕು  ಎಂಬ ಕುರಿತು ಚರ್ಚೆ ನಡೆಸಲಿದ್ದು, ಬಳಿಕ ಸಿಎಂ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಆದಕಾರಣ ಶೀಘ್ರದಲ್ಲಿಯೇ ದಂಡ ಕಡಿತ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ