ಬೆಂಗಳೂರು: ಹತ್ತಿದ ಏಣಿಯನ್ನು ಒದೆಯುವುದು ಬಿಜೆಪಿಯ ಹಳೇ ಚಾಳಿ! ಆಪರೇಷನ್ ಕಮಲಕ್ಕೆ ಬಲಿಯಾದ ರಮೇಶ್ ಜಾರಕಿಹೊಳಿ ಪರಿಸ್ಥಿತಿಯೂ ತಿಂದು ಎಸೆವ ಬಾಳೆ ಎಲೆಯಂತಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಸ್ವಂತ ಶಕ್ತಿಯಿಂದ ಅಧಿಕಾರದ ಹಿಡಿಯಲು ಸಾಧ್ಯವಾಗದೆ, 2019ರಲ್ಲಿ ಅನೈತಿಕ ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಸಿ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಸೆಳೆದು ಅಧಿಕಾರ ಅನುಭವಿಸಿದ ಬಿಜೆಪಿ, ಇಂದು ಅದೇ ಶಾಸಕರನ್ನು ಕಾಲಕಸದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ತನ್ನ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.
ನಿನ್ನೆ ರಮೇಶ್ ಜಾರಕಿಹೊಳಿ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ನಾನು ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಡುತ್ತೇನೆ ಹೊರತು ಬಿವೈ ವಿಜಯೇಂದ್ರನಿಗೆ ಅಲ್ಲ. ಆತನಿಗೆ ಅಧ್ಯಕ್ಷನಾಗುವ ಯಾವುದೇ ಅರ್ಹತೆ ಇಲ್ಲ ಎಂದು ಗುಡುಗಿದ್ದರು.
ಈ ಮೂಲಕ ಲದಿನಗಳಿಂದ ತಣ್ಣಗಾಗಿದ್ದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ನಡುವಿನ ವಾಕ್ಸಮರ ಮತ್ತೆ ಜೋರಾಗಿದೆ.