ಅಮಿತ್ ಶಾ ಸಾಹೇಬ್ರಿಗೂ ಸತ್ಯ ಹೇಳಲು ಬರುತ್ತೆ ಎಂದು ಲೇವಡಿ ಮಾಡಿದ ರಮ್ಯಾ
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ಅಂತೂ ಅಮಿತ್ ಶಾಗೂ ಕೆಲವೊಮ್ಮೆ ಸತ್ಯ ಹೇಳಲು ಬರುತ್ತೆ ಎಂಬುದನ್ನು ನಿರೂಪಿಸಿಬಿಟ್ಟರು. ಯಡಿಯೂರಪ್ಪ ಅತೀ ಭ್ರಷ್ಟ ಎಂಬ ನಿಮ್ಮ ಅಭಿಪ್ರಾಯವನ್ನು ನಾವೆಲ್ಲಾ ಅನುಮೋದಿಸುತ್ತೇವೆ ಅಮಿತ್ ಜೀ ಎಂದು ರಮ್ಯಾ ಕಾಲೆಳೆದಿದ್ದಾರೆ.
ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಇದೇ ರೀತಿ ಅಮಿತ್ ಶಾ ಲೇವಡಿ ಮಾಡಿದ್ದಾರೆ. ಅಮಿತ್ ಶಾ ನೀಡಿದ ಈ ತಪ್ಪು ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಗೆ ಒಳಗಾಗಿದೆ. ರಾಹುಲ್ ಗಾಂಧಿ ಭೇಟಿ ಸಂದರ್ಭದಲ್ಲಿ ಅವರು ವಿಶ್ವೇಶ್ವರಯ್ಯ ಹೆಸರು ಹೇಳಲು ತಡಕಾಡಿದ್ದೂ ಇದೇ ರೀತಿ ಸುದ್ದಿಯಾಗಿತ್ತು.