ರನ್ಯಾ ರಾವ್ ಬಗ್ಗೆ ಮತ್ತೊಂದು ಶಾಕಿಂಗ್ ವಿಚಾರ ರಿವೀಲ್: ಮದುವೆಯಾಗಿ ಒಂದೇ ತಿಂಗಳಿಗೆ ಹೀಗಾಗಿತ್ತು

Krishnaveni K

ಸೋಮವಾರ, 17 ಮಾರ್ಚ್ 2025 (19:40 IST)
ಬೆಂಗಳೂರು: ಚಿನ್ನ ಕಳ್ಳಸಾಗಣಿಕೆಯಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಬಗ್ಗೆ ಮತ್ತೊಂದು ಶಾಕಿಂಗ್ ವಿಚಾರ ಹೊರಬಂದಿದೆ. ಮದುವೆಯಾಗಿ ಒಂದೇ ತಿಂಗಳಿಗೆ ಅವರಿಗೆ ಹೀಗಾಗಿದೆ ಎಂದು ತಿಳಿದುಬಂದಿದೆ.

ನಟಿ ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಜತಿನ್ ಹುಕ್ಕೇರಿಯವರನ್ನೂ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅವರೂ ಬಂಧನ ಭೀತಿಯಲ್ಲಿದ್ದರು. ಆದರೆ ಅವರ ಪರ ವಕೀಲರು ಕೋರ್ಟ್ ಗೆ ನೀಡಿರುವ ಮಾಹಿತಿ ಮಾತ್ರ ಶಾಕಿಂಗ್ ಆಗಿದೆ.

ರನ್ಯಾ ನವಂಬರ್ ನಲ್ಲಿ ಜತಿನ್ ಜೊತೆ ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿಗೆ ದಂಪತಿ ಅನಧಿಕೃತವಾಗಿ ದೂರವಾಗಿದ್ದಾರೆ ಎಂದು ವಕೀಲರು ಕೋರ್ಟ್ ಗೆ ತಿಳಿಸಿದ್ದಾರೆ. ಈ ಕಾರಣಕ್ಕೆ ಜತಿನ್ ಗೆ ಬಂಧನದಿಂದ ವಿನಾಯ್ತಿ ನೀಡಲಾಗಿದೆ.

ರನ್ಯಾ ಸಿಕ್ಕಿಬೀಳುತ್ತಿದ್ದಂತೇ ಜತಿನ್ ಕೂಡಾ ಬಂಧನದ ಭೀತಿಯಲ್ಲಿದ್ದರು. ಇದೇ ಕಾರಣಕ್ಕೆ ಅವರು ನ್ಯಾಯಾಲಯದ ಮೊರೆ ಹೀಗಿದ್ದರು. ಇದೀಗ ಮಾರ್ಚ್ 24 ರವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಕೋರ್ಟ್ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ