ಅತ್ಯಾಚಾರ ಪ್ರಕರಣ: ಪಾದ್ರಿಗೆ ಜಾಮೀನು

ಸೋಮವಾರ, 15 ಅಕ್ಟೋಬರ್ 2018 (16:38 IST)
ಅತ್ಯಾಚಾರದ ಆರೋಪದ ಮೇರೆಗೆ ಜೈಲುಪಾಲಾಗಿದ್ದ ಪಾದ್ರಿಗೆ ಜಾಮೀನು ಮಂಜೂರು ಆಗಿದೆ.

ಜಲಂಧರ್ ಬಿಷಪ್ ಮುಲ್ಲಾಕಲ್ ಅವರಿಗೆ ಕೇರಳ ಹೈಕೋರ್ಟ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸನ್ಯಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಈ ಪಾದ್ರಿಯ ವಿರುದ್ಧ ಕೇಳಿಬಂದಿತ್ತು.

ಪಾದ್ರಿ ಬಿಷಪ್ ಪ್ರಾಂಕೋ ತಮ್ಮ ಪಾಸಪೋರ್ಟ ನ್ನು ಒಪ್ಪಿಸಬೇಕು. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎನ್ನುವ ಷರತ್ತಿನೊಂದಿಗೆ ನ್ಯಾಯಾಧೀಶರಾದ ರಾಜ ವಿಜಯ ರಾಘವನ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಅತ್ಯಾಚಾರ ಆರೋಪ ಕೇಳಿಬಂದ ಬಳಿಕ ತಲೆಮರೆಸಿಕೊಂಡಿದ್ದ ಪಾದ್ರಿ ಕೆಲ ದಿನಗಳ ಬಳಿಕ ಬಂಧನಕ್ಕೆ ಒಳಪಟ್ಟು, ಜೈಲು ಪಾಲಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ