ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿ ವಿರುದ್ಧ ದೂರು ದಾಖಲು

ಶನಿವಾರ, 18 ನವೆಂಬರ್ 2023 (18:00 IST)
ಅತ್ಯಾಚಾರಕ್ಕೊಳಗಾದ ಮಹಿಳೆಗೆ ತನ್ನ ಮೊದಲ ಪತಿಯಿಂದ ಹರೆಯದ ಮಗಳಿದ್ದಾಳೆ. ಕಳೆದ 2015ರಿಂದ ಪತಿ ಪತ್ನಿಯರಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಶರ್ಮಾ 70 ಸಾವಿರ ರೂಪಾಯಿಗಳ ನಗದು ಮತ್ತು 50 ಸಾವಿರ ರೂಪಾಯಿಗಳ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
 
ನಗರದ ಶಿವ ಕಾಲೋನಿಯಲ್ಲಿ ಲಿವಿಂಗ್ ಟುಗೇದರ್ ಸಂಬಂಧದಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳು(37) ತನ್ನ ಜೊತೆ ವಾಸವಾಗಿದ್ದ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಆರೋಪಿ ಚಾಲಕ ಕಮ್ಲೇಶ್ ಶರ್ಮಾ(44) ವಿರುದ್ಧ ಅತ್ಯಾಚಾರ, ಹಣ ವಸೂಲಿ, ವಂಚನೆ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
 
ಆರೋಪಿ ಕಮ್ಲೇಶ್ ಶರ್ಮಾ ಬಂಧನಕ್ಕೆ ಪೊಲೀಸ್ ಜಾಲ ಬೀಸಲಾಗಿದ್ದು,ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸ್ ಅಧಿಕಾರಿ  ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ