ಆಟೋ ಚಾಲಕರು V/S ರಾಪಿಡೋ

ಗುರುವಾರ, 20 ಜನವರಿ 2022 (15:48 IST)
ದ್ವಿಚಕ್ರ ವಾಹನದಿಂದ ಪ್ರಯಾಣ ಸೇವೆ ಒದಗಿಸಲು ಅವಕಾಶವಿಲ್ಲದಿದ್ದರೂ ಬೆಂಗಳೂರು ನಗರದಲ್ಲಿ ರ್‍ಯಾಪಿಡೋ ಬೈಕ್ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟಿರುವ ಸಾರಿಗೆ ಅಧಿಕಾರಿಗಳ ವಿರುದ್ಧ ಆಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ರ್‍ಯಾಪಿಡೋ ಬೈಕ್ ಸೇವೆಯಿಂದ ಆಟೋ ಚಾಲಕರು ಬೀದಿಗೆ ಬಿದ್ದಿದ್ದೇವೆ.
ನಮ್ಮ ಆಟೋಗಳನ್ನು ವೈಟ್ ಬೋರ್ಡ್‌ಗಳನ್ನಾಗಿ ಪರಿವರ್ತನೆ ಮಾಡಿಕೊಡಿ ಎಂದು ಗಾಂಧಿಗಿರಿ ಹೋರಾಟ ಆರಂಭಿಸಿದ್ದಾರೆ.
 
ಬೆಂಗಳೂರಿನಲ್ಲಿ ಆಟೋ ಚಾಲಕರ ಮೇಳೆ ಹೊಟ್ಟೆ ಹೊಡೆದು ಕಡಿಮೆ ಬೆಲೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿರುವ ರ್‍ಯಾಪಿಡೋ ಬೈಕ್‌ಗಳನ್ನು ನಿಲ್ಲಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈಟ್ ಬೋರ್ಡ್ ವಾಹನಗಳಲ್ಲಿ ಅದೇಗೆ ಕಮರ್ಷಿಯಲ್ ಸೇವೆ ನೀಡುತ್ತಿದ್ದಾರೆ ತನಿಖೆ ನಡೆಸಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ 20 ಕ್ಕೂ ಹೆಚ್ಚು ಆಟೋ ಚಾಲಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
 
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರ್‍ಯಾಪಿಡೋ ಬೈಕ್ ಸವಾರರು, ನಮಗೆ ಸೇವೆ ಮಾಡಲು ಆಪ್‌ನಲ್ಲಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನಾವು ಮಾಡುತ್ತಿದ್ದೇವೆ. ಇದರ ಬಗ್ಗೆ ತಕರಾರು ಇದ್ದರೆ ರ್‍ಯಾಪಿಡೋ ಬೈಕ್ ಸೇವೆ ಒದಗಿಸುತ್ತಿರುವ ಆಪ್ ಮತ್ತು ಕಂಪನಿ ವಿರುದ್ಧ ಆಟೋ ಚಾಲಕರು ಹೋರಾಟ ಮಾಡಲಿ. ನಮ್ಮ ಬೈಕ್ ನಿಲ್ಲಿಸಿ ನಮ್ಮ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತೀರಿ ಎಂದು ರ್‍ಯಾಪಿಡೋ ಬೈಕ್ ಸವಾರರು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ