ದೇಶಕ್ಕಾಗಿ ರಕ್ತ ಹರಿಸಲು ಸಿದ್ದಲಿರುವ ನಾನು ಚಿತ್ರಹಿಂಸೆ ಸಹಿಸಲ್ಲ: ಕೇಂದ್ರದ ವಿರುದ್ಧ ಗುಡುಗಿದ ಮಮತಾ

Sampriya

ಗುರುವಾರ, 11 ಏಪ್ರಿಲ್ 2024 (17:28 IST)
Photo Courtesy X
ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಸಮವಸ್ತ್ರದ ಅನುಷ್ಠಾನಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದರತ.

ಪಶ್ಚಿಮ ಬಂಗಾಳ ಈದ್-ಉಲ್-ಫಿತರ್ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ದೇಶಕ್ಕಾಗಿ ರಕ್ತ ಹರಿಸಲು ಸಿದ್ಧರಿದ್ದೇವೆ ಆದರೆ ಚಿತ್ರಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ.  ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ನಾನು ಎಲ್ಲಾ ಧರ್ಮಗಳ ನಡುವೆ ಸಾಮರಸ್ಯವನ್ನು ಬಯಸುತ್ತೇನೆ. ನಮ್ಮ ಸುರಕ್ಷತೆ,ನಮ್ಮ ಜೀವನ. ಎನ್ಆರ್‌ಸಿ ಇಲ್ಲ, ಸಿಎಎ ಇಲ್ಲ," ಎಂದು ಕೇಂದ್ರದ ವಿರುದ್ಧ ಗುಡುಗಿದರು.

ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಈದ್ ಮುಬಾರಕ್. ಇದು ಸಂತೋಷದ ಈದ್. ಇದು ಶಕ್ತಿ ನೀಡುವ ಈದ್. ಒಂದು ತಿಂಗಳ ಕಾಲ ನೀರು ಕುಡಿಯದೆ ಉಪವಾಸ ಮಾಡುವ ಮೂಲಕ ಈ ಈದ್ ಅನ್ನು ಆಚರಿಸುವುದು ದೊಡ್ಡ ವಿಷಯ" ಎಂದು ಮುಸ್ಲಿಂ ಬಾಂಧವರಿಗೆ ಶುಭಕೋರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ