ಬಂಡಾಯ ಶಾಸಕರು ಜೆಡಿಎಸ್‌‌ಗೆ ಬರುವುದು ಬೇಡ: ಕುಮಾರಸ್ವಾಮಿ ಗುಡುಗು

ಭಾನುವಾರ, 25 ಡಿಸೆಂಬರ್ 2016 (13:06 IST)
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವುದಾಗಿ ಜಮೀರ್ ಅಹ್ಮದ್ ನನ್ನ ಮುಖಕ್ಕೆ ಹೊಡೆದ ಹಾಗೇ ಹೇಳಿದ್ರೂ. ಹಾಗೇ ಮಾಡಿದ್ರೂ. ಇದೀಗ ಆಣೆ ಪ್ರಮಾಣ ಮಾಡುವುದರಲ್ಲಿ ಏನಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 
 
ಮಂಡ್ಯ ಜಿಲ್ಲೆಯ ಬೆನಮನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಸೇರಿದಂತೆ ಬಂಡಾಯ ಶಾಸಕರೆಲ್ಲ ದೊಡ್ಡ ವ್ಯಕ್ತಿಗಳು. ಅವರು ನಮ್ಮ ಪಕ್ಷಕ್ಕೆ ಬರುವುದು ಬೇಡ ಎಂದು ಸ್ಪಷ್ಟಪಡಿಸಿದರು.
 
ನಂಜನಗೂಡು ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೀಳಿಸುತ್ತೇವೆ. ಈ ಹಿಂದೆಯೇ ಹೇಳಿದಂತೆ ಅತ್ಯಂತ ಸರಳ ಹಾಗೂ ಸಜ್ಜನ ವ್ಯಕ್ತಿಯನ್ನು ಜೆಡಿಎಸ್ ಪಕ್ಷದಿಂದ ಕಣಕ್ಕೀಳಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ನಮಗೆ ಹೇಳಿದ್ದೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಈ ಕುರಿತು ಯಾವುದೇ ದೇವಾಲಯದಲ್ಲಿ ಪ್ರಮಾಣ ಮಾಡಲು ಸಿದ್ಧ. ಬೇಕಿದ್ದರೆ ಎಚ್‌ಡಿಕೆ ಅವರೇ ದೇವಾಲಯ ನಿಗದಿಪಡಿಸಲಿ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಸವಾಲ್ ಎಸೆದಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ