ಇದೀಗ, ಐಪೋನ್ ಬಳಕೆದಾರರಿಗೆ ಎಲ್ಲವೂ ಉಚಿತ

ಸೋಮವಾರ, 10 ಅಕ್ಟೋಬರ್ 2016 (14:59 IST)
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, ಹೊಸ ಐಪೋನ್ ಖರೀದಿದಾರರಿಗೆ ಉಚಿತ ವೈಸ್ ಕಾಲ್, 20 ಜಿಬಿ ಡೇಟಾ ಹಾಗೂ ಅನಿಯಮಿತ ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತಿದೆ.
ರಿಲಯನ್ಸ್ ಜಿಯೋ ನೆಟ್‌ವರ್ಕ್ ಹೊಂದುವ ಹೊಸ ಐಪೋನ್ ಬಳಕೆದಾರರು ಜನವರಿ 1 ರಿಂದ 1 ವರ್ಷಾಂತ್ಯದವರೆಗೂ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದಾಗಿದೆ. 
 
ಈ ಹೊಸ ಯೋಜನೆಯಡಿಯಲ್ಲಿ, ಹೊಸ ಐಪೋನ್ ಬಳಕೆದಾರರು ಒಂದು ವರ್ಷಗಳ ಕಾಲ ರಿಲಯನ್ಸ್ ಜಿಯೋದ ಪೂರಕ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. 
 
ಜನವರಿ 1 ರಿಂದ, ಎಲ್ಲಾ ಐಪೋನ್‌ ಬಳಕೆದಾರರು ಒಂದು ವರ್ಷದ ಅವಧಿಗೆ 1499 ರೂಪಾಯಿ ಮೌಲ್ಯದ ಪ್ಲ್ಯಾನ್‌ನ್ನು ಸಂಪೂರ್ಣ ಉಚಿತವಾಗಿ ಪಡೆಯಲಿದ್ದು, ಇದರ ಮೌಲ್ಯ 18 ಸಾವಿರ ರೂಪಾಯಿಗಳಿಗೆ ಸಮ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ