ಬೆಳೆಗಾರರಿಗೆ ಪರಿಹಾರ ಧನ : ಮೇ 26 ರೊಳಗೆ ಅರ್ಜಿ ಸಲ್ಲಿಸಿ

ಗುರುವಾರ, 14 ಮೇ 2020 (16:44 IST)
ಕೋವಿಡ್-19 ನಿಂದಾಗಿ ಲಾಕ್ ಡೌನ್ ಮಾಡಿರುವ  ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಸರಕಾರ ಸಹಾಯಧನ ವಿತರಣೆ ಮಾಡುತ್ತಿದ್ದು, ಬೆಳೆಗಾರರಿಂದ ಅರ್ಜಿ ಸಲ್ಲಿಸಲು ಸೂಚಿಸಿದೆ.

ಲಾಕ್ ಡೌನ್ ನಿಂದ ಎಲ್ಲಾ ದೇವಾಲಯಗಳು ಮುಚ್ಚಿದ್ದು, ಹಬ್ಬ, ಮದುವೆ, ಸಭೆ ಸಮಾರಂಭಗಳು ಹಾಗೂ ಮತ್ತಿತರೆ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿರುತ್ತದೆ. ಹೂವಿನ ಬೆಳೆಗಳಿಗೆ ಬೇಡಿಕೆ ಇಲ್ಲದ ಕಾರಣ ಹೂ ಬೆಳೆಗಾರರು ತಾವು ಬೆಳೆದಂತಹ ಹೂಗಳನ್ನು ಕಟಾವು ಮಾಡದೆ ಬೆಳೆ ಹಾನಿಯಾಗಿರುತ್ತದೆ.

ಈ ಹಿನ್ನಲೆಯಲ್ಲಿ 2020-21 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರಾಮನಗರ ಜಿಲ್ಲೆಯ ಹೂವು ಬೆಳೆಗಾರರಿಗೆ ಪರಿಹಾರಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಿಳಿಸಿದ್ದಾರೆ.

ಹೂವಿನ  ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿ ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ಪ್ರದೇಶಕ್ಕೆ ರೂ. 25,000 ಮೀರದಂತೆ ಪರಿಹಾರ ಧನ ನೀಡಲಾಗುವುದು.

ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯಲ್ಲಿನ ಪಟ್ಟಿಯಲ್ಲಿ ಹೆಸರಿಲ್ಲದ ಹೂ ಬೆಳಗಾರರು ನಿಗದಿತ ಅರ್ಜಿ ನಮೂನೆ, ಪಹಣಿ, ಬ್ಯಾಂಕ್ ಖಾತೆ ಪುಸ್ತಕ ಮತ್ತು ಸ್ವಯಂ ದೃಢೀಕರಣ ಘೋಷಣಾ ಪತ್ರದೊಂದಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಮೇ 26 ರೊಳಗಾಗಿ ಅರ್ಜಿ ಸಲ್ಲಿಸುವುದು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ