ಸ್ಯಾನಿಟರಿ ಪ್ಯಾಡ್ ವಿತರಿಸಿ ಮೆಚ್ಚುಗೆಗೆ ಪಾತ್ರರಾದ ಧ್ಯುತಿ ಚಾಂದ್

ಗುರುವಾರ, 14 ಮೇ 2020 (09:21 IST)
ನವದೆಹಲಿ: ಕೊರೋನಾದಿಂದಾಗಿ ಹಲವಾರು ಮಂದಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದ್ದು, ಇಂತಹವರಿಗೆ ಸಿನಿ, ಕ್ರೀಡಾ ತಾರೆಯರು ತಮ್ಮದೇ ರೀತಿಯಲ್ಲಿ ನೆರವಿನ ಹಸ್ತ ಚಾಚಿದ್ದಾರೆ.

 

ಎಲ್ಲರೂ ಸಂಕಷ್ಟಕ್ಕೀಡಾದವರಿಗೆ ದಿನಸಿ ಸಾಮಾನು, ಆಹಾರ ಪೊಟ್ಟಣ ನೀಡಿದ್ದರೆ, ಅಥ್ಲೆಟ್ ಧ್ಯುತಿ ಚಾಂದ್ ತಮ್ಮ ಗ್ರಾಮದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಗತ್ಯ ವಸ್ತುಗಳ ಜತೆಗೆ ಮಹಿಳೆಯರಿಗೆ ಅಗತ್ಯವಾದ ಸ್ಯಾನಿಟರಿ ಪ್ಯಾಡ್ ಗಳನ್ನೂ ವಿತರಿಸಿರುವ ಧ್ಯುತಿಯನ್ನು ಟ್ವಿಟರಿಗರು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ