ಕಾರವಾರ : ಧರ್ಮ ಸಂಘರ್ಷದಲ್ಲಿ ಬಿಜೆಪಿಗೆ ಸಹಾಯವಾಗಿದೆ. ಜನರಿಗೆ ಯಾವುದೇ ಸಹಾಯ ಆಗಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದರು.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ DFA ಗ್ರೌಂಡ್ನಲ್ಲಿ ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ ದೇಶಪಾಂಡೆ ಪರ ಮತ ಪ್ರಚಾರ ಸಭೆಗೆ ಆಗಮಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 40% ಸರ್ಕಾರ, 2.5 ಲಕ್ಷ ಕೋಟಿ ಹಣ ಲೂಟಿ ಮಾಡಿದೆ. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲ ಲೂಟಿ ಮಾಡುತ್ತಿದ್ದಾರೆ.
ಪ್ರಧಾನಿಯವರು ಹುಲಿ ನೋಡಲು ಇಲ್ಲಿಗೆ ಬರುತ್ತಾರೆ. ಚುನಾವಣೆ ಪ್ರಚಾರಕ್ಕೆ ಇಲ್ಲಿಗೆ ಬರುತ್ತಾರೆ. ಆದರೆ ಜನರ ಸಮಸ್ಯೆ ಕೇಳಲು ಇಲ್ಲಿಗೆ ಬರುವುದಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ತರಾಟೆ ತೆಗೆದುಕೊಂಡರು.
ರಾಜ್ಯದಲ್ಲಿ ಲೂಟ್, ಲಾಲಜ್, ಅಧಿಕಾರದ ಸರ್ಕಾರವಿದೆ. ಇದನ್ನು ಸರಿ ಪಡಿಸಲು ಜನ ಒಟ್ಟಾಗಬೇಕು. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲಾ ಲೂಟಿ ಮಾಡುತ್ತಿದ್ದಾರೆ. ಈ ಹಣ ಸಾರ್ವಜನಿಕರದ್ದು, ಇದನ್ನು ಸರಿಪಡಿಸಲು ಜನ ಒಟ್ಟಾಗಬೇಕು. ಧರ್ಮ ಸಂಘರ್ಷದಲ್ಲಿ ಬಿಜೆಪಿಗೆ ಸಹಾಯವಾಗಿದೆ. ಜನರಿಗೆ ಯಾವುದೇ ಸಹಾಯ ಆಗಿಲ್ಲ ಎಂದು ಕಿಡಿಕಾರಿದರು.