ಖ್ಯಾತ ಇಎನ್‌ಟಿ ಸ್ಪೆಷಲಿಸ್ಟ್ ಡಾ.ಸತೀಶ ಪೂಜಾರಿ ಹೃದಯಾಘಾತದಿಂದ ಸಾವು

Sampriya

ಗುರುವಾರ, 11 ಜುಲೈ 2024 (19:30 IST)
ಕೋಟ: ಖ್ಯಾತ ಇಎನ್‌ಟಿ ವೈದ್ಯ ಡಾ ಸತೀಶ  ಪೂಜಾರಿ ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕುಂದಾಪುರ ಶ್ರೀಮಾತಾ ಅಸ್ಪತ್ರೆಯ ಆಡಳಿತ ಪಾಲುದಾರ ಇವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ಇವರು ಕುಂದಾಪುರ ಶ್ರೀಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಶನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಗಾಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಹಲವಾರು ಆಲ್ಬಂ ಸಾಂಗ್ ಗಳಿಗೆ, ಭಕ್ತಿಗೀತೆಗಳಿಗೆ ಧ್ವನಿ ನೀಡಿದ್ದಾರೆ. ಅದಲ್ಲದೆ ಸಂಗೀತ ರಸಮಂಜರಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ.

ಡಾ. ಎಸ್. ಜಾನಕಿ ಅವರ ಕಟ್ಟಾ ಅಭಿಮಾನಿಯಾಗಿ ಪ್ರತಿ ವರ್ಷ ಕೋಟೇಶ್ವರದಲ್ಲಿ ಡಾ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರ ಆಯೋಜಿಸಿ ನಾಡಿನ ಹಲವು ಮಂದಿ ಗಣ್ಯ ಹಾಡುಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಮನಸ್ಮಿತಾ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ