ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟ ಮನವಿ ಪತ್ರದ ಕತೆ ಏನಾಗುತ್ತಿದೆ ನಿಜಕ್ಕೂ ಶಾಕಿಂಗ್

Krishnaveni K

ಶನಿವಾರ, 13 ಜುಲೈ 2024 (09:36 IST)
ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜನತಾ ದರ್ಶನದ ಸಂದರ್ಭದಲ್ಲಿ ಜನರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೀಡುವ ಮನವಿ ಪತ್ರದ ಕತೆ ಏನಾಗುತ್ತಿದೆ ಗೊತ್ತಾ? ನಿಜಕ್ಕೂ ಶಾಕಿಂಗ್.

ಜುಲೈ 10 ರಂದು ಚಾಮರಾಜನಗರದಲ್ಲಿ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ  ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರು. ಈ ವೇಳೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಿಎಂ ಮನವಿ ಪತ್ರಗಳನ್ನು ಸ್ವೀಕರಿಸಿದ್ದರು.

ಈ ಸಮಾವೇಶದಲ್ಲಿ ರೈತರು, ಕಾರ್ಮಿಕರು ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಈಗ ನೋಡಿದರೆ ಆ ಎಲ್ಲಾ ಮನವಿ ಪತ್ರ ಕಸದ ರಾಶಿಯಲ್ಲಿಪತ್ತೆಯಾಗಿವೆ. ಇಷ್ಟೊಂದು ಜನ ಮುಖ್ಯಮಂತ್ರಿಗಳು ತಮ್ಮ ಸಮಸ್ಯೆ ಬಗೆಹರಿಸುತ್ತಾರೆಂದು ಸಲ್ಲಿಸಿದ ಮನವಿ ಪತ್ರಗಳ ಈ ಸ್ಥಿತಿಯಾಗಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರೆ ಸಮಸ್ಯೆ ಬಗೆಹರಿಸುತ್ತಾರೆಂದು ಮನವಿ ಪತ್ರ ನೀಡಲಾಗುತ್ತದೆ. ಆದರೆ ಅದನ್ನು ಇಷ್ಟು ಅಸಡ್ಡೆಯಿಂದ ಕಸದ ರಾಶಿಗೆ ಸೇರಿಸುವುದಿದ್ದರೆ ಜನತಾ ದರ್ಶನ ಮಾಡುವ ಮತ್ತು ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ಬಿಟ್ಟು ಗಂಟೆಗಟ್ಟಲೆ ಕ್ಯೂ ನಿಲ್ಲುವುದಕ್ಕೆ ಯಾವ ಅರ್ಥವಿದೆ ಎಂದು ಆಕ್ರೋಶ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ