ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ, ಮಾಸ್ಕ್ ಅಂತ ಜನರ ಜೇಬಿಗೆ ಕೈ ಹಾಕುತ್ತಿದ್ದ ಮಾರ್ಷಲ್ ಗಳೀಗ ಪಾಲಿಕೆಗೇ ಹೊರೆಯಾಗಿದ್ದು,ಸದ್ಯ ಮಾರ್ಷಲ್ ಗಳಿಂದ ಬಿಬಿಎಂಪಿಗೆ ಪ್ರತಿ ತಿಂಗಳು ಸರಾಸರಿ 7 ಲಕ್ಷ ರೂಪಾಯಿ ಆದಾಯ ಬರುತ್ತಿದೆ.ಆದರೆ ಪ್ರತಿ ತಿಂಗಳಿಗೆ ಮಾರ್ಷಲ್ ಗಳ ನಿರ್ವಹಣಾ ವೆಚ್ಚವೇ ಒಂದು ಕೋಟಿ ರೂಪಾಯಿ.ಪ್ರತಿ ತಿಂಗಳು ತನ್ನ ಜೇಬಿಂದಲೇ ಸುಮಾರು 90 ಲಕ್ಷ ರೂ. ಬಿಬಿಎಂಪಿ ಖರ್ಚು ಮಾಡುತ್ತಿದೆ.ಸದ್ಯ ಬಿಬಿಎಂಪಿಯಲ್ಲಿ 437 ಮಾರ್ಷಲ್ ಗಳಿಂದ ಫೀಲ್ಡ್ ನಲ್ಲಿ ಫೈನ್ ಕಲೆಕ್ಟ್ ಕೆಲಸ ಆಗ್ತಿದೆ
ಪ್ರತಿ ತಿಂಗಳು ಸುಮಾರು 25 ಸಾವಿರ ರೂಪಾಯಿ ಒಬ್ಬೊಬ್ಬ ಮಾರ್ಷಲ್ ಗೆ ಸಂಬಳವನ್ನ ಪಾಲಿಕೆ ಕೊಡುತ್ತಿದೆ.ಹೀಗಾಗಿ ಇವರಿಂದ ಬರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 90 ಲಕ್ಷ ಖರ್ಚು ಬಿಬಿಎಂಪಿ ಮಾಡುತ್ತಿದೆ.ಮಾರ್ಷಲ್ ಗಳ ಸ್ಕ್ವಾಡ್ ವಾಹನದ ಖರ್ಚೂ ಕೂಡ ಪಾಲಿಕೆ ಪಾಲಿಗೆ ಹೊರೆಯಾಗಿದೆ.2018ರಲ್ಲಿ ಜನರಿಗೆ ಎಚ್ಚರಿಕೆ ಹಾಗೂ ಫೈನ್ ಕಲೆಕ್ಟ್ ಕೆಲಸಕ್ಕೆ ಮಾರ್ಷಲ್ಸ್ ಗಳನ್ನ ಬಿಬಿಎಂಪಿ ನೇಮಿಸಿತ್ತು.ನೇಮಕಗೊಂಡ ಮರುವರ್ಷವೇ ಕೊರೋನಾ ದಾಳಿಯಾಗಿದೆ. ಆಗ ಮಾಸ್ಕ್ ಹಾಗೂ ಜನ ನಿಯಂತ್ರಣಕ್ಕೆ ಬಳಿಕೆ ಮಾಡಿಕೊಳ್ಳಲಾಗಿತ್ತು.