ದೇಶದಲ್ಲಿ ಸ್ಥಗಿತಗೊಂಡಿದ್ದ ಎಲ್ಲ ರೈಲು ಸೇವೆ ಪುನರಾರಂಭ

ಬುಧವಾರ, 17 ನವೆಂಬರ್ 2021 (20:21 IST)
ಕೊರೋನಾ ಮಹಾಮಾರಿಯಿಂದ ದೇಶದಲ್ಲಿ ಕಳೆದ ಮಾರ್ಚ್ ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಸೇವೆ ಇನ್ನು ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳಲಿದೆ.
ದೇಶದ ಹಲವೆಡೆ ಈಗಾಗಲೇ ಬಸ್ ಸಂಚಾರ ಪ್ರಾರಂಭವಾಗಿದ್ದರೂ ರೈಲು ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದ ರೈಲುಗಳ ಸಂಚಾರ ಪುನರಾರಂಭಿಸಲಾಗುತ್ತಿದೆ.
ಈ ಹಿಂದೆ ನಿಗದಿಪಡಿಸಲಾಗಿದ್ದ ವಿಶೇಷ ದರವನ್ನು ರದ್ದುಪಡಿಸಲಾಗಿದ್ದು, ಕೋವಿಡ್ ಗೂ ಮುನ್ನ ಇದ್ದ ಸಾಮಾನ್ಯ ದರವೇ ಮುಂದುವರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದರೊಂದಿಗೆ ಮುಂದಿನ ಕೆಲವು ದಿನಗಳಲ್ಲಿ 1,700 ಕ್ಕೂ ಹೆಚ್ಚು ರೈಲುಗಳು ಸಂಚರಿಸಲಾಗುತ್ತದೆ. ಇದೀಗ ನವೆಂಬರ್ ಅಂತ್ಯದೊಳಗೆ ದೇಶದಲ್ಲಿನ ಎಲ್ಲಾ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ