ಆರ್.ಎಸ್ ಎಸ್ ಇಲ್ಲದೇ ಏನಾಗುತ್ತಿತ್ತು ಎಂದು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು:ವಿಶ್ವನಾಥ್

ಮಂಗಳವಾರ, 28 ಸೆಪ್ಟಂಬರ್ 2021 (19:59 IST)
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಮೇಲೆ ಹಿಡಿತ ಇಲ್ಲದಂತೆ ಮಾತನಾಡುತ್ತಾರೆ. ಹಿಂದುತ್ವ ಮತ್ತು ಆರ್.ಎಸ್.ಎಸ್ ವಿರೋಧ ಮಾಡಿದರೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬ ಕೆಟ್ಟ ಅಭಿಪ್ರಾಯವಿದೆ. ಇವತ್ತು ಆರ್ ಎಸ್ ಎಸ್ ಇಲ್ಲದೇ ಹೋಗಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಯಲಹಂಕ ಶಾಸಕ ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಕಿಡಿಕಾರಿದರು.    
 
ಸಿದ್ದರಾಮಯ್ಯ ಹಿಂದೂಗಳು, ಆರ್.ಎಸ್.ಎಸ್ ಬಗೆಗಿನ ಹಗುರವಾದ ಮಾತುಗಳಿಗೆ ಪ್ರತ್ಯುತ್ತರಿಸುತ್ತಾ, ನಾವೆಲ್ಲರೂ ಮೂಲ ಆರ್.ಎಸ್.ಎಸ್ ನಿಂದ ಬಂದವರು, ನಮಗೆ ಯಾವುದೇ ರೀತಿಯಲ್ಲಿ ಬಹಿರಂಗವಾಗಿ ನೇಣಿಗೆ ಹಾಕಿ, ಕೈ ಕತ್ತರಿಸಿ, ಕಲ್ಲು ಹೊಡೆಯಿರಿ ಎಂದು ಆರ್.ಎಸ್.ಎಸ್. ಭಾರತ್ ಮಾತಾಕಿ ಜೈ ಎನ್ನಬೇಕು, ವಂದೇ ಮಾತರಂ ಹೇಳಬೇಕು, ನಮ್ಮ ದೇಶಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುತ್ತದೆ ನಾವು ಧ್ವನಿ ಎತ್ತಬೇಕು. ಈ ದಿಸೆಯಲ್ಲಿ ಆರ್.ಎಸ್.ಎಸ್ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯನವರು ಇನ್ನು ಮುಂದಾದರೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಚಡ್ಡಿಗಳು ಎಂದು ಹೇಳುವುದನ್ನು ನಿಲ್ಲಿಸಬೇಕು. ಮೊದಲ ಮೊನ್ನೆ ವಿಧಾನಸಭೆಯಲ್ಲಿ ಪಂಚೆ ಉದುರಿದಾಗ ಈ ಚಡ್ಡಿಯೇ ಅವರ ಮಾನ ಉಳಿಸಿದೆ. ದೇಶದ ಗೌರವ, ಸಂಸ್ಕೃತಿಯನ್ನು ಉಳಿಸುವ ಹೋರಾಟದ ಹೋರಾಟವನ್ನು ಹೊಂದಿರುವ ಸಂಸ್ಥೆ. ಒಮ್ಮೆ ಸಿದ್ದರಾಮಯ್ಯನವರು ನಮ್ಮ ಕ್ಯಾಂಪ್ ಗೆ ಬಂದು ಅಲ್ಲಿನ ಶಿಸ್ತು ದೇಶಭಕ್ತಿಯನ್ನು ಕಲಿಯಲಿ ಎಂದು ಟಾಂಗ್ ನೀಡಲಾಗಿದೆ.
 
ಟ್ರೈನಿಂಗ್ ಕ್ಯಾಂಪ್ ಗೆ ಬಂದರೆ ಮನವನ್ನುಸ್ಥಿತಿ ಬದಲಿ. ದಯಮಾಡಿ ಸಿದ್ದರಾಮಯ್ಯನವರೇ ನೀವು ಒಂದು ತಿಂಗಳ ಮಟ್ಟಿಗೆ ನಮ್ಮ ಆರ್ ಎಸ್ ಎಸ್ ಎಸ್ ಕ್ಯಾಂಪ್ ಗೆ ಬನ್ನಿ. ನೀವೆಲ್ಲಾ ತಾಲಿಬಾನ್ ಪರವಾಗಿರುವವರು. ನೀವು ಒಮ್ಮೆಯೂ ತಾಲಿಬಾನ್ ವಿರೋಧಿಸಿಲ್ಲ. ತಾಲಿಬಾನ್ ಮನಸ್ಥಿತಿ ಕಾಂಗ್ರೆಸ್ ನವರಿಗೆ ಇದೆ ಎಂದು ದೂರಿದರು.
 
ನೀವು ಎಷ್ಟು ಆರ್ ಎಸ್ ಎಸ್ ಎಂದರೆ ಟೀಕೆ ಮಾಡುತ್ತೀರಿ, ನರೇಂದ್ರ ಮೋದಿಯವ ರನ್ನು ಟೀಕೆ ಮಾಡುತ್ತೀರಿ ಅಷ್ಟು ಕಪ್ಪು ಚುಕ್ಕೆ ನಿಮಗಾಗಿ ಆಗುತ್ತಿದೆ. ನಿಮಗೆ ತುಂಬಾ ಡ್ಯಾಮೇಜ್ ಆಗುತ್ತದೆ. ನೀವು ಹೀಗೆ ಮಾತನಾಡುತ್ತಾ ಹೋದರೆ ಜನ ನಿಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳೋಲ್ಲ. ನೀವು ಸೈಕಲ್, ಜಟಕಾ ಹತ್ತಿ ರಾಜ್ಯ ಸುತ್ತುವ ವೇಳೆಗೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಟೀಕೆಗಳಿಗೆ ಉತ್ತರ ಕೊಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ