ಬೆಳಮಗಿ ಕೊಲೆ ಯತ್ನ ಆರೋಪ ಪ್ರಕರಣ: ನಾನು ಕೊಲೆ ಮಾಡಿಲ್ಲ ಎಂದ ಕಾರು ಚಾಲಕ
ಕಲಬುರ್ಗಿ: ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಕೊಲೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರ ಕಾರು ಚಾಲಕ ವಿನಯ್ ಪ್ರತ್ಯಕ್ಷ್ಯವಾಗಿದ್ದಾರೆ.
ನಾನು ಕೊಲೆಗೆ ಯತ್ನ ಮಾಡಿಲ್ಲ. ಯಾವ ದೇವರ ಮೇಲೆ ಆಣೆ ಮಾಡಲೂ ನಾನು ಸಿದ್ಧ. ಅಪಘಾತವಾದ ನಂತರ ನನ್ನ ಮನೆಗೆ ಬಂದಿಲ್ಲ ಎಂದು ಬೆಳಮಗಿ ಆರೋಪ ಮಾಡಿದ್ದಾರೆ. ಅಪಘಾತವಾದ ಮಾರನೇ ದಿನವೇ ನಾನು ಅವರ ಮನೆಗೆ ಹೋಗಿದ್ದೇನೆ. ಆದರೆ ಅವರು ಯಾವುದೇ ರೆಸ್ಪಾನ್ಸ್ ಮಾಡಿಲ್ಲ. ಹೀಗಾಗಿ ನಾನು ಅಲ್ಲಿ ಕೆಲಸ ಬಿಟ್ಟು ಬೇರೆಡೆ ಕೆಲಸಕ್ಕೆ ಸೇರಿದ್ದೇನೆ. ನಾನು ಕೊಲೆಗೆ ಯತ್ನವೂ ಮಾಡಿಲ್ಲ. ಯಾರೂ ಕೊಲೆಗೆ ಕುಮ್ಮಕ್ಕು ನೀಡಿಲ್ಲ ಎಂದು ಹೇಳಿದ್ದಾರೆ.