ಮಳೆಯಿಂದಾಗಿ ದೆಹಲಿಯ ಹಲವು ಪ್ರದೇಶಗಳ ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ಮುಳುಗಿ

ಭಾನುವಾರ, 12 ಸೆಪ್ಟಂಬರ್ 2021 (19:33 IST)
ಮಳೆಯಿಂದಾಗಿ ದೆಹಲಿಯ ಹಲವು ಪ್ರದೇಶಗಳ ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ಮುಳುಗಿ ಹೋಗಿವೆ. ಮಧು ವಿಹಾರ್ ಪ್ರದೇಶದಲ್ಲಿ ಬಸ್ ಸಿಲುಕಿಕೊಂಡಿದೆ. ಮುಂಜಾನೆಯಿಂದಲೇ ದೆಹಲಿ-ಎನ್‌ಸಿಆರ್‌ನಲ್ಲಿ ಭಾರೀ ಮಳೆ
ದೆಹಲಿ ಅನೇಕ ಪ್ರದೇಶಗಳು ಜಲಾವೃತ
ಸಂಜೆಯವರೆಗೂ ದೆಹಲಿ-ಎನ್‌ಸಿಆರ್‌ನಲ್ಲಿ ಮಳೆಯಾಗುವ ಸಾಧ್ಯತೆ
ನವದೆಹಲಿ : ಭಾರೀ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿ ಹೋಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ . ಮಳೆಯಿಂದಾಗಿ, ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ.  ರಸ್ತೆಗಳಲ್ಲಿ ನೀರು ತುಂಬಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್  ಕಂಡು ಇದೆ. 
 
ದೆಹಲಿಯ ಹಲವು ರಸ್ತೆಗಳು ಜಲಾವೃತ : 
ದೆಹಲಿಯ ರಾಮಲೀಲಾ ಮೈದಾನ ಪ್ರದೇಶ ಮಳೆಯಿಂದಾಗಿ (Delhi rain) ಸಂಪೂರ್ಣ ಜಲಾವೃತವಾಗಿದೆ. ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಸಂಚಾರದ ವೇಗಕ್ಕೆ ಬ್ರೇಕ್ ಹಾಕಲಾಗಿದೆ. ನೀರು ನಿಂತಿರುವುದರಿಂದ  ಚಾಲಕರು ಸಮಸ್ಯೆಗಳನ್ನು ಎದುರಿಸುವಂತಾಯಿತು. 
ಮಳೆಯಿಂದಾಗಿ ದೆಹಲಿಯ ಹಲವು ಪ್ರದೇಶಗಳ ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ಮುಳುಗಿ ಹೋಗಿವೆ. ಮಧು ವಿಹಾರ್ (Madhu vihar) ಪ್ರದೇಶದಲ್ಲಿ ಬಸ್ ಸಿಲುಕಿಕೊಂಡಿದೆ. ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಹಲವು ಬಸ್‌ಗಳು ರಸ್ತೆ ಮಧ್ಯೆಯೇ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಿಂಟೋ ಸೇತುವೆಯ ಸುತ್ತಮುತ್ತಲಿನ ಪ್ರದೇಶವು ನೀರಿನ ಸಂಗ್ರಹದಿಂದಾಗಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿ ನೀರು ಮೊಣಕಾಲಿನವರೆಗೂ ನೀರು ನಿಂತಿರುವುದು ಕಂಡು ಬಂತು. 
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ (Indira gandhi airport) ಮಳೆ ನೀರು ತುಂಬಿ ಹೋಗಿದೆ.  ಈ ಮಧ್ಯೆ, ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಮಳೆ ಜೊತೆ ಭಾರೀ ಗಾಳಿ ಕೂಡಾ ಬೀಸುತ್ತಿದೆ. ಮಳೆಯ ನಂತರ ದೆಹಲಿಯ ಸುಪ್ರೀಂ ಕೋರ್ಟ್ (Suprem court) ರಸ್ತೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ