ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ: ದೆಹಲಿಯಲ್ಲಿ ಆರೆಂಜ್ ಅಲರ್ಟ್

ಶನಿವಾರ, 11 ಸೆಪ್ಟಂಬರ್ 2021 (11:06 IST)
ನವದೆಹಲಿ : ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಇಂದು (ಶನಿವಾರ) ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ. ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಬಗ್ಗೆ ಹವಾಮಾನ ಇಲಾಖೆಯು ಟ್ವಿಟರ್ನಲ್ಲಿ ಮಾಹಿತಿ ನೀಡಿದೆ. ʼದೆಹಲಿಯಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿ ಪ್ರದೇಶ (ಬಹದೂರ್ಗಢ, ಗುರುಗ್ರಾಮ, ಮಾನೇಸರ್, ಫರೀದಾಬಾದ್, ಬಲ್ಲಭ್ಗಢ, ಲೋನಿ ದೇಹತ್, ಹಿಂಡಾನ್ ಎಎಫ್ ಸ್ಟೇಷನ್, ಘಾಜಿಯಾಬಾದ್, ಇಂದಿರಾಪುರಂ, ಛಪ್ರೌಲಾ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ) ಹರಿಯಾಣ (ಕೈಥಾಲ್, ಕರ್ನಲ್, ರಾಜೌಂದ್, ಅಸ್ಸಾಂಧ್, ಸಫೀದಾನ್, ಪಾಣಿಪತ್, ಗೊಹಾನಾ, ಗನ್ನೌರ್, ಸೋನಿಪತ್, ಖಾರ್ಖೊಡ, ಜಿಂದ್, ರೋಹ್ಟಕ್, ಹನ್ಸಿ, ಮೆಹಮ್, ಭಿವಾನಿ, ಝಜ್ಜರ್, ನರ್ನೌಲ್) ಉತ್ತರ ಪ್ರದೇಶದಲ್ಲಿ (ಶಾಮ್ಲಿ, ಕಾಂಡ್ಲಾ, ಬರೌತ್, ಬಾಗ್ಪತ್, ಮೀರತ್, ಸಿಯಾನ, ಹಾಪುರ್, ಪಹಸು, ಬುಲಂದ್ಷಹರ್) ಮಳೆ ಜೊತೆಗೆ ವೇಗವಾಗಿ ಗಾಳಿ ಬೀಸಲಿದೆʼ ಎಂದು ತಿಳಿಸಿದೆ. ರಾಜಧಾನಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ