ಗಂಡು ಶಿಶುವಿಗೆ ಆ ವೈದ್ಯ ಮಾಡಿದ್ದೇನು?
ಆಗ ತಾನೇ ಹುಟ್ಟಿದ ಗಂಡು ಶಿಶುವನ್ನು ರಸ್ತೆ ಬದಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ.
ನವಜಾತ ಗಂಡು ಶಿಶು ಪತ್ತೆಯಾಗಿದೆ. ರಸ್ತೆ ಬದಿ ಶಿಶುವನ್ನು ಪೋಷಕರು ಬಿಟ್ಟು ಹೋದ ಘಟನೆ ನಡೆದಿದೆ. ಕಲಬುರಗಿಯ ಲಾಲಗೇರಿ ಕ್ರಾಸ್ ಹತ್ತಿರ ಘಟನೆ ನಡೆದಿದೆ. ಆಗಷ್ಟೆ ಜನಿಸಿದ ನವಜಾತ ಗಂಡು ಶಿಶುವನ್ನು ಹರವಾಳಕರ್ ಆಸ್ಪತ್ರೆಯ ವೈದ್ಯೆ ಡಾ. ಮಂಗಲಾ ಹರವಾಳಕರ್ ಅವರಿಂದ ರಕ್ಷಣೆಯಾಗಿದೆ.
ಚೈಲ್ಡ್ ಲೈನ್ ಗೆ ಹಸ್ತಾಂತರಿಸಿ ಮಾನವೀಯತೆಯನ್ನು ವೈದ್ಯೆ ಮೆರೆದಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಗುವಿಗೆ ಚಿಕಿತ್ಸೆ ನೀಡಲಾಗಿದ್ದು, ಮಗು ಆರೋಗ್ಯದಿಂದ ಇದೆ. ಅಮುಲ್ಯ ಶಿಶು ವಿಹಾರಕ್ಕೆ ಮಗು ಹಸ್ತಾಂತರಿಸಲಾಗುತ್ತಿದೆ. ರಸ್ತೆ ಬದಿ ಬಿಟ್ಟುಹೋದ ಪೋಷಕರ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.