ಕಾಡಿನ ರಕ್ಷಣೆಗೆ ಫೋಟೋ ಪ್ರದರ್ಶನ ಮಾಡಿ ಬಂದ ದುಡ್ಡು ನೀಡಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಂಗಳವಾರ, 26 ಫೆಬ್ರವರಿ 2019 (09:17 IST)
ಬೆಂಗಳೂರು: ಬಂಡೀಪುರ ಅರಣ್ಯ ವಲಯದಲ್ಲಿ ಸಂಭವಿಸಿರುವ ಬೆಂಕಿ ಅನಾಹುತ ಪ್ರಾಣಿ ಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ತೀವ್ರ ನೋವು ತಂದಿದೆ.


ಈಗಾಗಲೇ ಸ್ವಯಂ ಸೇವೆಗೆ ಆಸಕ್ತಿಯುಳ್ಳವರು ಕಾಡಿನ ಬೆಂಕಿ ನಂದಿಸಲು ನೆರವಾಗಿ ಎಂದು ಕರೆಕೊಟ್ಟಿದ್ದ ದರ್ಶನ್ ಇದೀಗ ಅಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವವರಿಗೆ ಅಗತ್ಯ ವಸ್ತುಗಳಾದ ನೀರು, ಗ್ಲುಕೋಸ್ ಇತ್ಯಾದಿ ಪೂರೈಸಿದ್ದಾರೆ.

ಕಾಡು ಹೀಗೆ ನಾಶವಾದರೆ ಪ್ರಾಣಿಗಳು ಎಲ್ಲಿಗೆ ಹೋಗಬೇಕು ಸ್ವಾಮಿ? ಅವುಗಳು ನಾಡಿಗೆ ಬಂದೇ ಬರುತ್ತವೆ. ಇನ್ನು, ಮೂರು ತಿಂಗಳು ಬೇಸಿಗೆ ಬೇರೆ. ಅವುಗಳಿಗೆ ನೀರು ಆಹಾರಕ್ಕೆ ಊರಿಗೆ ಬರದೇ ಬೇರೆ ದಾರಿಯೇನಿದೆ?’ ಎಂದು ದರ್ಶನ್ ಬೇಸರಿಸಿದ್ದಾರೆ. ಅಷ್ಟೇ ಅಲ್ಲದೆ, ತಾವು ಕಾಡು ಸುತ್ತಿ ತೆಗೆದಿದ್ದ ವೈಲ್ಡ್ ಲೈಫ್ ಫೋಟೋಗಳನ್ನು ಪ್ರದರ್ಶನ ಮಾಡಿ ಅದರಲ್ಲಿ ಬಂದ ದುಡ್ಡನ್ನು ಕಾಡು ಸಂರಕ್ಷಣೆ ಹಾಗೂ ಅಲ್ಲಿನ ಜನರ ಕಲ್ಯಾಣಕ್ಕೆ ನೀಡಲು ದರ್ಶನ್ ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ, ಮಾರ್ಚ್ 1 ರಿಂದ ಕಾಡಿಗೆ ಭೇಟಿ ನೀಡಿ ತಮ್ಮ ಕೈಲಾದ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ