ಪೊಲೀಸರ ಮೇಲೇ ದಾಳಿಗೆ ಸಜ್ಜಾಗಿದ್ದ ರೌಡಿಗಳು..!
ಕಡಬಗೆರೆ ಸೀನನ ಮೇಲಿನ ಶೂಟೌಟ್ ಬಳಿಕ ನಗರದಲ್ಲಿ ರೌಡಿಗಳ ಹೆಡೆಮುರಿ ಕಟ್ಟಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈ ಮಧ್ಯೆ, ತಮ್ಮ ಬೆನ್ನುಬಿದ್ದಿರುವ ಪೊಲೀಸರ ವಿರುದ್ಧವೇ ದಾಳಿ ನಡೆಸಲು ರೌಡಿಗಳು ಮುಂದಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿದ ಪೊಲೀಸರು ನಾಲ್ವರು ರೌಡಿ ಶಿಟರ್`ಗಳನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ರೌಡಿಗಳ ಉಪಟಳ ಮಿತಿ ಮೀರಿದೆ, ಕಾನೂನು ಉಲ್ಲಂಘಿಸುವವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ದರು.