ಸಿಲಿಕಾನ್ ಸಿಟಿಯ ಸಂಚಾರಿ ಪೊಲೀಸ್ರಿಗೆ ಸಾರ್ವಜನಿಕರ ಸಲಾಂ ಹೊಡೆದಿದ್ದು, ಸಲೀಂ ಸಾಹೇಬ್ರ ಈಜಿ ಮೆಥಡ್ ಗೆ ಜನ ಫಿದಾ ಆಗಿದ್ಧಾರೆ. ಪೀಕ್ ಟೈಮಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಗೆ ಬ್ರೇಕ್ ಹಾಕಿದ್ದು, ಇದರಿಂದ ದೊಡ್ಡ ವಾಹನ ಓಡಾಡ್ದೇ ಇರೋದ್ರಿಂದ ಟ್ರಾಫಿಕ್ ಕೂಡ ಕಡಿಮೆಯಾಗಿದೆ ಇದರಿಂದ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೆಬ್ಬಾಳ, ಕೆ.ಆರ್ ಮಾರ್ಕೆಟ್, ಲಿಂಗರಾಜಪುರ ಈ ಭಾಗದಲ್ಲಿ ಫುಲ್ ಟ್ರಾಫಿಕ್ ಫ್ರೀ ಆಗಿದ್ದು, ಇಷ್ಟು ದಿನ ವಾಹನ ಸವಾರರು ಹಿಡಿ ಶಾಪ ಹಾಕ್ಕೊಂಡೇ ರಸ್ತೆಗಿಳೀತಿದ್ರು. ಅಯ್ಯೋ ಆಫೀಸ್ ಗೆ ಬೇಗ ಹೋದ್ರೆ ಸಾಕಪ್ಪಾ. ಯಾವ ಏರಿಯಾದಲ್ಲೂ ಟ್ರಾಫಿಕ್ ಜಾಮ್ ಆಗ್ದೇ ಇರ್ಲಪ್ಪ ಅಂತಿದ್ರು. ಆದ್ರೆ, ಇದೀಗ ಪೀಕ್ ಟೈಮಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಇರೋ ಕಡೆ ದೊಡ್ಡ ವಾಹನಕ್ಕೆ ಕಡಿವಾಣ ಹಾಕಲಾಗಿದೆ.
ಇದರಿಂದ ವಾಹನಗಳು ಸಲೀಸಾಗೇ ಸಾಗ್ತಿದ್ದಾವೆ. ಇದೀಗ ವಾಹನ ಸಂಚಾರಿ ಪೊಲೀಸರಿಗೆ ಜನಸ್ಪಂದನೆ ಸಿಗುತ್ತಿದೆ. ಬೇಷ್ ಬೆಂಗಳೂರು ಸಂಚಾರಿ ಪೊಲೀಸರೇ ಅಂತ ಟ್ವಿಟರ್ ನಲ್ಲೂ ಬರ್ಕೊಳ್ತಿದ್ದಾರೆ. ಇಷ್ಟು ಬೇಗ ಟ್ರಾಫಿಕ್ ಸಮಸ್ಯೆ ತೀರುತ್ತೆ ಅಂತ ತಿಳಿದೇ ಇರಲಿಲ್ಲ. ಹೀಗೆ ಹತ್ತಾರು ಪೋಸ್ಟ್ ಗಳು ಸಂಚಾರಿ ಪೊಲೀಸರ ಟ್ವಿಟರ್ ಖಾತೆಗೆ ಬರ್ತಿದ್ದಾವೆ. ಜಟಿಲವಾದ ಸಮಸ್ಯೆಗೆ ಸೂಕ್ಷ್ಮವಾದ ಉತ್ತರ ಕೊಟ್ಟ ಬೆಂಗಳೂರು ಸಂಚಾರಿ ಪೊಲೀಸರಿಗೆ ಮತ್ತೊಮ್ಮೆ ಹ್ಯಾಡ್ಸಾಫ್ ಮಾಡುತ್ತಿದ್ದಾರೆ.