ಸಪ್ತಪದಿ ಸರಳ ಸಾಮೂಹಿಕ ವಿವಾಹ ; ಜನ ಏನೆಂದರು?

ಭಾನುವಾರ, 8 ಮಾರ್ಚ್ 2020 (13:05 IST)
ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮದಾಯ ದತ್ತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸಪ್ತಪದಿ ಸರಳ ಸಾಮೂಹಿಕ ವಿವಾಹ ಜನಪ್ರಿಯವಾಗುತ್ತಿದೆ.

ಸಪ್ತಪದಿ ಸರಳ ಸಾಮೂಹಿಕ ವಿವಾಹವು ಸರ್ವ ಜನರ ಹಾಗೂ ಪಕ್ಷಾತೀತ ಮೆಚ್ಚುಗೆ ಪಡೆದಿದೆ ಎಂದು ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ  ಸಪ್ತಪದಿ ಸರಳ ಸಾಮೂಹಿಕ ವಿವಾಹದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಆಶ್ರಯದಲ್ಲಿ ಈ ವಿವಾಹಗಳು ನಡೆಯುತ್ತಿದ್ದರೂ ಸಾರ್ವಜನಿಕರ ಸಹಭಾಗಿತ್ವದಿಂದ ನಮ್ಮ ಮನೆಯ ಮಕ್ಕಳ ಮದುವೆಯಂತೆ ನಡೆಯಬೇಕು. 

ಸವದತ್ತಿಯಲ್ಲಿ ಏಪ್ರಿಲ್ 24 ರಂದು ಪ್ರಥಮ ಬಾರಿಗೆ ಸಪ್ತಪದಿ ವಿವಾಹ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಎ ದರ್ಜೆಯ ದೇವಾಲಯಗಳ ಆಶ್ರಯದಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು.

ಶಾಸಕ ಪಿ. ರಾಜೀವ ಅವರು ಮಾತನಾಡಿ, ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ದೇಶದಲ್ಲಿಯೇ ಒಂದು ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ