ಶಾಲೆಗೆಬಾಂಬ್ ಬೆದರಿಕೆ ಇ-ಮೇಲ್

ಶುಕ್ರವಾರ, 6 ಜನವರಿ 2023 (16:09 IST)
ರಾಜಾಜಿನಗರದಲ್ಲಿರುವ ಎನ್ ಪಿ ಎಸ್ ಶಾಲೆಗೆ ಬಾಂಬ್  ಬೆದರಿಕೆ ಮೇಲ್ ಬಂದಿದ್ದು,ತಕ್ಷಣ ಪೊಲೀಸರಿಗೆ ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ.ಸ್ಥಳಕ್ಕಾಗಮಿಸಿದ ಬಸವೇಶ್ವರನಗರ ಮತ್ತು ರಾಜಾಜಿನಗರ ಪೊಲೀಸರು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.ಶಾಲೆಗೆ ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಆಗಿದ್ದು,ಪ್ರಕರಣ ದಾಖಲಿಸಿಕೊಂಡು  ಪಶ್ಚಿಮ ವಿಭಾಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ