ಸೆಪ್ಟೆಂಬರ್ ನಿಂದ ಶಾಲೆ-ಕಾಲೇಜ್ ಆರಂಭ : ಶಿಕ್ಷಣ ಸಚಿವ?

ಶುಕ್ರವಾರ, 14 ಆಗಸ್ಟ್ 2020 (22:06 IST)
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆಗಸ್ಟ್ 31 ರವರೆಗೆ ಶಾಲೆ, ಕಾಲೇಜ್ ಗಳು ಆರಂಭವಾಗುವುದಿಲ್ಲ.

ಹೀಗಂತ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಕೇಂದ್ರ ಸರ್ಕಾರದ ಆದೇಶ ನೀಡಿದ ನಂತರ ಶಾಲಾ-ಕಾಲೇಜು ಆರಂಭಕ್ಕೆ ರಾಜ್ಯಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಶಾಲೆ - ಕಾಲೇಜು ಆರಂಭ ಆಗುವುದಿಲ್ಲ ಎಂದು ನಾನು ಹೇಳಿಯೇ ಇಲ್ಲ. ನಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ತಿರುಚಲಾಗಿದೆ ಎಂದೂ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ