ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ; ಅರ್ಜಿ ಸಲ್ಲಿಸಲು ಫೆ.11 ಕಡೆ ದಿನ

ಬುಧವಾರ, 9 ಫೆಬ್ರವರಿ 2022 (20:14 IST)
ಉದ್ಯೋಗ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಕಂದಾಯ ಇಲಾಖೆಯು 3000 ಭೂಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅನ್ ಲೈನ್ ಆಸಕ್ತರು ಅರ್ಜಿ ಸಲ್ಲಿಸಲು ಫೆ.11 ಕಡೆ ದಿನ ಆಗಿದೆ.
 
ಜಿಲ್ಲಾವಾರು ಹುದ್ದೆಗಳು:
ಬೆಂಗಳೂರು 65, ಬೆಂಗಳೂರು ಗ್ರಾಮಾಂತರ 12, ದಾವಣಗೆರ 183, ಬಳ್ಳಾರಿ 27, ವಿಜಯನಗರ 29, ಚಿತ್ರದುರ್ಗ 93, ಚಾಮರಾಜನಗರ 50, ತುಮಕೂರು 334, ದಕ್ಷಿಣ ಕನ್ನಡ 66, ಕಲಬುರಗಿ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಬಾಗಲಕೋಟೆ 60, ಬೀದರ್ 13, ಮಂಡ್ಯ 195, ಮೈಸೂರು 136, ಯಾದಗಿರಿ 45, ರಾಮನಗರ 155, ರಾಯಚೂರು 54, ಹಾವೇರಿ 299, ಹಾಸನ 136, ಶಿವಮೊಗ್ಗ 127 ಉಡುಪಿ 131, ಉತ್ತರಕನ್ನಡ 101, ಕೊಡಗು 100, ಕೊಪ್ಪಳ 66, ವಿಜಯಪುರ 76, ಬೆಳಗಾವಿ 112, ಕೋಲಾರ 137, ಗದಗ 46.
 
ವಿದ್ಯಾರ್ಹತೆ :
ಸಿವಿಲ್‌ ಎಂಜಿನಿಯರಿಂಗ್ ವಿಭಾಗದಲ್ಲಿ ಬಿಇ, ಬಿ.ಟೆಕ್ ಮತ್ತು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವವರು ಹಾಗು ಕನಿಷ್ಠ 18 ವರ್ಷ, ಗರಿಷ್ಠ 65 ವರ್ಷ ವಯೋಮಿತಿಯೊಳಗಿರುವವರು ಅರ್ಜಿ ಹಾಕಲು ಅರ್ಹರು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
 
ಅರ್ಜಿ ಸಲ್ಲಿಸುವ ವಿಧಾನ: https://landrecords.karnataka.gov.in/service201/ ಲಿಂಕ್ ಮೇಲೆ ಕ್ಲಿಕ್ ಮಾಡಿ. ಪಕ್ಕದಲ್ಲಿರುವ ಬಾಕ್ಸನಲ್ಲಿ ಅಭ್ಯರ್ಥಿಯ ಮೊಬೈಲ್ ನಂಬರ್ ನಮೂದಿಸಿ, ನಂತರ ಅಭ್ಯರ್ಥಿಯು ಅರ್ಜಿ ಸಲ್ಲಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ