ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ

ಬುಧವಾರ, 5 ಏಪ್ರಿಲ್ 2023 (19:25 IST)
ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭವಾಗಿದ್ದು,ಮೇ ಮೊದಲ ವಾರದಲ್ಲಿ ಫಲಿತಾಂಶ ಸಾಧ್ಯತೆ ಇದೆ.10 ರಿಂದ 15 ದಿನಗಳ ಕಾಲ ಮೌಲ್ಯಮಾಪನ  ನಡೆಯಲಿದೆ.
 
 21 ಸಾವಿರದ  831 ಉಪನ್ಯಾಸಕರನ್ನ ಮೌಲ್ಯಮಾಪನಕ್ಕೆ ನಿಯೋಜನೆ ಮಾಡಿದ್ದು ,ಇಂದಿನಿಂದ ರಾಜ್ಯಾದ್ಯಾಂತ 65 ಕೇಂದ್ರಗಳಲ್ಲಿ ಆರಂಭವಾಗಿರುವುದಾಗಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ.ಒಟ್ಟಾರೆ 37 ವಿಷಯಗಳಲ್ಲಿ 7.27 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ .44 ಲಕ್ಷ ಉತ್ತರಪತ್ರಿಕೆಗಳಿವೆ ಎಂದು  ಪರೀಕ್ಷಾ ಶಿಕ್ಷಣ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಆರ್ ಮಾಹಿತಿ ನೀಡಿದ್ದಾರೆ.ವಿದ್ಯಾರ್ಥಿಗಳ ಅನುಕೂಲಕ್ಕೆ ಫಲಿತಾಂಶವನ್ನು ಮೇ ಮೊದಲ ವಾರದಲ್ಲೇ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ