ಕಮಲ ಪಾಳಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಕಸರತ್ತು...!

ಸೋಮವಾರ, 22 ಮೇ 2023 (19:51 IST)
ವಿಧಾನಸಭೆ ಚುನಾವಣೆಯಲ್ಲಿ‌ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದ್ದು ಕಾಂಗ್ರೆಸ್  ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚನೆ ಮಾಡಿದೆ. ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದು ಹಾಗಿದೆ. ಸದ್ಯ ಇಗ ಸರ್ಕಾರ ಹಾಗೂ ಆಢಳಿತ ಪಕ್ಷದ ನಾಯಕರನ್ನ ಎದುರಿಸುವ ವಿಪಕ್ಷ ನಾಯಕರು ಯಾರಾಗ್ತಾರೆ ಅನ್ನೋದು ಚರ್ಚೆಯಾಗ್ತಿದೆ. ಹಾಗಾದ್ರೆ ಬಿಜೆಪಿ ಪಾಳಯದಲ್ಲಿ ವಿಪಕ್ಷ ಸ್ಥಾನಕ್ಕೆ ಯಾರೆಲ್ಲಾ ನಾಯಕರು ರೇಸ್ ನಲ್ಲಿದ್ದಾರೆ .ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದು ಆಢಳಿತ ಪಕ್ಷದ ಸ್ಥಾನದಲ್ಲಿದೆ ಕೂತಿದೆ. ಇತ್ತ ಆಢಳಿತ ಪಕ್ಷವಾಗಿದ್ದ ಬಿಜೆಪಿಗೆ ಚುನಾವಣೆಯಲ್ಲಿ ತೀವ್ರ ಮುಖಭಂಗಾವಾಗಿ ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಠಕ್ಕರ್ ನೀಡುವಂತಾ ,ಆಡಳಿತ ಪಕ್ಷವನ್ನ ಸಮರ್ಥವಾಗಿ ಟೀಕಿಸುವ,‌ ತಪ್ಪುಗಳನ್ನ ಎತ್ತಿ ತೋರಿಸುವ ಚಾಣಾಕ್ಷ ನಾಯಕನ ಹುಡುಕಾಟದಲ್ಲಿ‌ದ್ದಾರೆ ಬಿಜೆಪಿ ನಾಯಕರು.

ವಿರೋಧ ಪಕ್ಷದ ನಾಯಕ ಅಂದ್ರೆ‌ ಹಳಿತಪ್ಪಿ ನಡೆಯೋ ಸರ್ಕಾರಕ್ಕೆ ಚಾಟಿ ಬೀಸುವಾ ಚಾಣಾಕ್ಷನಾಗಿ ಆಡಳಿತಾತ್ಮಕ ವಿಚಾರದಲ್ಲಿ ಅನುಭವ ಇರೋ ನಾಯಕರಿಗೆ ವಿಪಕ್ಷ ಸ್ಥಾನದಲ್ಲಿ ಕೂರಿಸಬೇಕಾಗುತ್ತದೆ.. ವಿಪಕ್ಷ ನಾಯಕನ ಆಯ್ಕೆಗೆ ದೆಹಲಿಯಿಂದ ಹೈಕಮಾಂಡ್ ನಾಯಕರು ಆಗಮಿಸುತ್ತಿದ್ದು ಕೆಲವೇ ದಿನಗಳಲ್ಲಿ ಆಯ್ಕೆ ಮಾಡಲಾಗುತ್ತೆ ಅಂತ ಮಾಜಿ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
 
ಇನ್ನೆರಡು ದಿನಗಳಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಿ ಪ್ರತಿಪಕ್ಷ ನಾಯಕನನ್ನ ಆಯ್ಕೆ ಮಾಡಿ ಫೈನಲ್ ಮಾಡುವ ಸಾದ್ಯತೆಗಳಿದ್ದು, ಯತ್ನಾಳ್, ಸುರೇಶ್ ಕುಮಾರ್, ಅರವಿಂದ್ ಬೆಲ್ಲದ್, ಸುನಿಲ್ ಕುಮಾರ್ ಹೆಸರು ಚರ್ಚೆಯಲ್ಲಿದ್ರು , ಆಡಳಿತಾತ್ಮಕ‌ವಿಚಾರಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಾಯಕರ ಹುಡುಕಾಟದಲ್ಲಿದ್ದೆ ಹೈಕಮಾಂಡ್.  ಇಲಾಖಾವಾರು ಯೋಜನೆಗಳ ವಿವರಗಳು, ನಿಭಾಯಿಸಿರುವ ಖಾತೆಗಳು, ಅವುಗಳ ನಿರ್ವಹಣೆ, ಕಳೆದ ನಾಲ್ಕು ವರ್ಷಗಳಲ್ಲಿ ರೂಪಿಸಿದ ಕಾರ್ಯಕ್ರಮಗಳು, ಜನತೆಗೆ ತಲುಪಿಸಿದ ರೀತಿ ಅದನ್ನು ಅತಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ಸಮರ್ಥ ವಿಪಕ್ಷನಾಯಕನ ಆಯ್ಕೆ ಅವಶ್ಯಕತೆ ಇದೆ.ಹಾಗಾಗಿ ಹೈಕಮಾಂಡ್ ನಾಯಕರು ಮಾಜಿ ಸಿಎಂ  ಬಸವರಾಜ ಬೊಮ್ಮಾಯಿ ಕಡೆ ಗಮನಹರಿಸಿದೆ ಎಂದು ಹೇಳಲಾಗ್ತಿದೆ.

ಒಟ್ನಲ್ಲಿ ಆಢಳಿತದ ಅನುಭನ ಎರಡನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನ ವಿಪಕ್ಷ ನಾಯಕರು ನಿಭಾಯಿಸುವುದು ಸುಲಭದ ಮಾತಲ್ಲಾ, ಹಾಗಾಗಿ ಬಿಜೆಪಿ ಹೈಕಮಾಂಡ್ ನಾಯಕರು ಅಳೆದು ತೂಗಿ ವಿಪಕ್ಷ ನಾಯಕನನ್ನ ಆಯ್ಕೆ ಮಾಡ್ತಿದೆ. ಸಾಕಷ್ಟು ನಾಯಕರು ರೇಸ್ ನಲ್ಲಿದ್ದರು ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ವಿಪಕ್ಷ ಸ್ಥಾನದ ನಾಯಕರನ್ನಾಗಿ ಹೈಕಮಾಂಡ್ ಆದೇಶ ಕೊಡುತ್ತಾ‌ ಅನ್ನೋದನ್ನ ಕಾದುನೋಡಬೇಕಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ