ಉಕ್ಕಿ ಹರಿಯುವ ನದಿಯಲ್ಲಿ ಯುವಕರು ಹುಚ್ಚಾಟವಾಡಿರೋ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆದಿದೆ. ಯುವಕರು ಜಲಾವೃತವಾಗಿರುವ ಶ್ರಮಬಿಂದುಸಾಗರದ ಸೇತುವೆ ಮೇಲೆ ಓಡಾಡುವುದಲ್ಲದೇ, ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ. ಹಿಪ್ಪರಗಿ ಬ್ಯಾರೇಜ್ನಿಂದ 90 ಸಾವಿರ ಕ್ಯೂಸೆಕ್ಗಿಂತಲೂ ಅಧಿಕ ನೀರು ಹರಿದು ಬರ್ತಿದೆ.ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಶ್ರಮಬಿಂದು ಸಾಗರದ ಮೇಲ್ಭಾಗಕ್ಕೆ ನೀರು ಚಿಮ್ಮುತ್ತಿದೆ.. ಅಪಾಯ ಲೆಕ್ಕಿಸದೇ ಯುವಕರು ಸೆಲ್ಫಿಗಾಗಿ ಸೇತುವೆ ಮೇಲೆ ಹೋಗ್ತಿದ್ದಾರೆ.