ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮ ಮಾಡಲು ಮುಂದಾದ ರಾಜ್ಯ ಹಿರಿಯ ನಾಯಕರು

ಸೋಮವಾರ, 10 ಫೆಬ್ರವರಿ 2020 (10:15 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ  ಇಂದು ಅಥವಾ ನಾಳೆ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಲು ರಾಜ್ಯ ಹಿರಿಯ ನಾಯಕರು ತೀರ್ಮಾನಿಸಿದ್ದಾರೆ.


ಸೋನಿಯಾ ಗಾಂಧಿಯ ಜೊತೆ ಅನೌಪಚಾರಿಕವಾಗಿ ಚರ್ಚೆ ನಡೆಸಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.


ಲೋಕಸಭೆ ಕಲಾಪ ಮುಗಿಯುತ್ತಿದ್ದಂತೆ ಹೆಸರು ಅಂತಿಮ ಮಾಡುವ ನಿಟ್ಟಿನಲ್ಲಿ  ರಾಜ್ಯ ಹಿರಿಯ ನಾಯಕರು ಮತ್ತೊಮ್ಮೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಕೇಳಿದ್ದಾರೆ.  ಆದರೆ ಕಾಂಗ್ರೆಸ್ ಹಿರಿಯರ ಮನವಿಗೆ ಸೋನಿಯಾ ಗಾಂಧಿ ಅಷ್ಟಾಗಿ ಸ್ಪಂದಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ