ಪ್ರೀತಿಸಲು ಒಲ್ಲೆ ಎಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಸಜೆ

ಶನಿವಾರ, 10 ನವೆಂಬರ್ 2018 (15:09 IST)
ಆಕೆ ಅಪ್ರಾಪ್ತೆ ಬಾಲಕಿ. 15 ವರ್ಷದ ಬಾಲಕಿಗೆ ಪ್ರೀತಿ ಮಾಡು. ಮನೆ ಬಿಟ್ಟು ನನ್ನ ಜತೆ ಓಡಿ ಬಾ ಎಂದು ಕರೆದಿದ್ದ ಆರೋಪಿ. ಆದರೆ ಅಪ್ರಾಪ್ತೆ ಒಪ್ಪದಿದ್ದಾಗ ಆಕೆ ಸ್ಕೂಲಿಗೆ ಹೋಗುವಾಗ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಾಪಯ್ಯ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾನೆ. 15 ವರ್ಷದ ಬಾಲಕಿಯನ್ನು ಪ್ರೀತಿಸು ಎಂದು ಬೆನ್ನು ಬಿದ್ದಿದ್ದನು. ಅಷ್ಟೇ ಅಲ್ಲ ಆಕೆ ಪ್ರೀತಿ ನಿರಾಕರಿಸಿದಾಗ ಅಡ್ಡಗಟ್ಟಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು.

ಈ ಕುರಿತು ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿ ಕಲಬುರಗಿ ಎರಡನೇ ಅಪರ ಜಿಲ್ಲಾ ಮತ್ತು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ