ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಸಾವಿಗೆ ಕಾರಣನಾದವನಿಂದ ತಂಗಿಗೂ ಲೈಂಗಿಕ ಕಿರುಕುಳ

ಶನಿವಾರ, 10 ಫೆಬ್ರವರಿ 2018 (11:44 IST)

ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಸಾವಿಗೆ ಕಾರಣನಾದ ವ್ಯಕ್ತಿಯೊಬ್ಬ ಮೃತ ಯುವತಿಯ ತಂಗಿಗೂ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಯುವತಿಯೊಬ್ಬರು ಆತಂಕಕ್ಕೀಡಾಗಿದ್ದಾಳೆ.

ಚನ್ನಪಟ್ಟಣ ತಾಲೂಕಿನ ಬಿ.ವಿ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಹಾಂತೇಶ್ ಎಂಬಾತ ಗ್ರಾಮದ ಯುವತಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದರಿಂದ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆದರೆ ಇದೀಗ ಈ ಕಾಮುಕನ ಕಣ್ಣು ಮೃತ ಯುವತಿಯ ಸೋದರಿ ಮೇಲೆ ಬಿದ್ದಿದೆ.

ಅಸಭ್ಯವಾಗಿ ಮಾತನಾಡುವ ಕಾಮುಕ ಬಾಲಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಿರುಕುಳ ನೀಡಿದ್ದಾನೆ. ಇತ್ತೀಚೆಗೆ ಬಟ್ಟೆ ಒಗೆಯುವ ವೇಳೆ ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ. ಅಲ್ಲದೆ ಬೆದರಿಕೆ ಕೂಡ ಹಾಕಿದ್ದಾನೆ.

ವಿಚಾರದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ