ಅತ್ಯಾಚಾರದ ದೂರು ನೀಡಲು ಬಂದಿದ್ದ ಸಂತ್ರಸ್ತೆ ಮೇಲೆ ಪೇದೆಯಿಂದ ಮತ್ತೆ ಅತ್ಯಾಚಾರ

ಗುರುವಾರ, 8 ಫೆಬ್ರವರಿ 2018 (15:41 IST)
ಸಾಮಾಹಿಕ ಅತ್ಯಾಚಾರದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಸಂತ್ರಸ್ತೆ ಮೇಲೆ ಪೊಲೀಸ್ ಪೇದೆಯೇ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.
 
ಜಾರ್ಖಂಡ್‍ನ ಜಮ್‌ಶೆಡ್‌ಪುರದಲ್ಲಿ ಘಟನೆ ನಡೆದಿದ್ದು, ಮಾಂಗೋ ಪೊಲೀಸ್ ಠಾಣೆಯಲ್ಲಿ ಪೇದೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ 17 ವರ್ಷದ ಸಂತ್ರಸ್ತೆ ಆರೋಪ ಮಾಡಿದ್ದಾಳೆ.
 
2017ರ ಫೆಬ್ರವರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆದರೆ ಒಂದು ವರ್ಷದ ನಂತರ 2018ರ ಜನವರಿಯಲ್ಲಿ ದೂರು ಸಲ್ಲಿಸಲು ಮುಂದಾಗಿದ್ದ ಸಂತ್ರಸ್ತೆ ಮಾಂಗೋ ಪೊಲೀಸ್ ಠಾಣೆಗೆ ಬಂದಾಗ ಪೊಲೀಸ್ ಠಾಣೆಯಲ್ಲಿಯೇ ಪೇದೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.
 
ಗಸ್ತಿನಲ್ಲಿದ್ದ ಪೊಲೀಸ್ ತಂಡ ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆತಂದ ನಂತರ ಪೇದೆ ಈ ಹೀನ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ