ಪುತ್ರಿಯನ್ನು ಗರ್ಭವತಿಯಾಗಿಸಿ ಮಕ್ಕಳಿಗೆ ಅವಳೇ ನಿಮ್ಮ ತಾಯಿ ಎಂದ ಕಾಮಿ ತಂದೆ

ಗುರುಮೂರ್ತಿ

ಬುಧವಾರ, 7 ಫೆಬ್ರವರಿ 2018 (15:52 IST)
ತನ್ನ ಸ್ವಂತ ಮಗಳೊಂದಿಗೆ ಗೌಪ್ಯವಾಗಿ ಅಕ್ರಮ ಸಂಬಂಧವನ್ನು ಇರಿಸಿಕೊಂಡು ತನ್ನ ಕಿರಿಯ ಮಕ್ಕಳಿಗೆ ಅವಳನ್ನೇ ತನ್ನ ಮಲತಾಯಿ ಎಂದು ಹೇಳುವಂತೆ ಪ್ರಚೋದನೆ ನೀಡಿದ ಆರೋಪ ಮತ್ತು ವ್ಯಭಿಚಾರ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
42 ವರ್ಷದವನಾಗಿರುವ ಸ್ಟೀವನ್ ಪ್ಲಾಡ್ಲ್ ತನ್ನ ಸ್ವಂತ ಮಗಳಾಗಿರುವ 20 ವರ್ಷದ ಕೇಟ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು ಇದರ ಪ್ರತಿಫಲವಾಗಿ ಅವರಿಗೆ 4 ತಿಂಗಳು ಹಸುಗೂಸು ಇರುವುದು ದುರ್ದೈವದ ಸಂಗತಿ ಎಂದೇ ಹೇಳಬಹುದು. ಸ್ಟೀವನ್ ಹೆಂಡತಿಯ ಪ್ರಕಾರ ಸ್ಟೀವನ್ ತನ್ನ ಸ್ವಂತ ಮಗಳೊಂದಿಗೆ ಸಂಸಾರ ನಡೆಸುತ್ತಿರುವುದು ತನ್ನ ಇತರ ಮಕ್ಕಳ ದಿನಚರಿ ಡೈರಿ ಓದುವಾಗ ಈ ರಹಸ್ಯ ಸಂಬಂಧದ ವಿಷಯ ಬಹಿರಂಗಗೊಂಡಿದ್ದು, ಆ ಡೈರಿಯಲ್ಲಿ ಕೇಟ್ ಗರ್ಭವತಿಯಾಗಿದ್ದು ಅದಕ್ಕೆ ತನ್ನ ತಂದೆಯಾದ ಸ್ಟೀವನ್ ಪ್ಲಾಡ್ಲ್ ಕಾರಣ ಎಂದು ಬರೆಯಲಾಗಿತ್ತು ಎಂದು ಹೇಳಿಕೊಂಡಿದ್ದಾಳೆ.
 
ಈ ಕುರಿತು ಅವಳು ಈ ವಿಷಯವನ್ನು ದೃಢೀಕರಿಸಿಕೊಂಡ ನಂತರ ಸ್ಟೀವನ್ ವಿಷಯವನ್ನು ಬಹಿರಂಗಪಡಿಸಿದ್ದು ತನ್ನ ಮಗಳೊಂದಿಗೆ ಜೀವನ ಸಾಗಿಸಲು ಮನೆಯಿಂದ ಹೊರಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲ ಕೇಟ್ ಮಗುವಾಗಿದ್ದಾಗ ಅವಳನ್ನು ಬೇರೆ ದಂಪತಿಗಳಿಗೆ ದತ್ತು ನೀಡಲಾಗಿತ್ತು, ಆದರೆ ಅವಳಿಗೆ 18 ವರ್ಷ ತುಂಬಿದಾಗ ಅವಳು ಸಾಮಾಜಿಕ ಜಾಲತಾಣಗಳ ಮೂಲಕ ಪತ್ತೆಯಾಗಿದ್ದು ನಮ್ಮೊಂದಿಗೆ ವಾಸಮಾಡುತ್ತಿದ್ದಳು. ಅವಳು ಇಲ್ಲಿ ವಾಸ ಮಾಡುವ ಸಂದರ್ಭದಲ್ಲಿ ಅವಳು ಮಲಗುವ ಕೋಣೆಯಲ್ಲಿ ಅವಳ ತಂದೆ ನೆಲದ ಮೇಲೆ ಮಲಗುತ್ತಿದ್ದರು. ಕೆಲವು ದಿನಗಳ ನಂತರ ಅವಳು ಈ ಮನೆಯನ್ನು ತೊರೆದು ಬೇರೆಡೆ ಮನೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸ ಮಾಡತೊಡಗಿದಳು ಇದಾದ ಮೂರು ತಿಂಗಳಿಗೆ ಸ್ಟೀವನ್ ತನ್ನ ಜೊತೆ ವಿಚ್ಛೇದನ ಪಡೆದುಕೊಂಡರು ಎಂಬುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಈ ಸಂಬಂಧ ಸ್ವಂತ ಮಕ್ಕಳೊಂದಿಗೆ ದೈಹಿಕ ಸಂಬಂಧ ಮತ್ತು ವ್ಯಭಿಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಈ ವಿಷಯವನ್ನು ತನಿಖೆ ನಡೆಸಿದಾಗ ಸ್ಟೀವನ್ ತನ್ನ ಉಳಿದ ಮಕ್ಕಳಿಗೆ ಕೇಟ್ (ಸಹೋದರಿ) ಅನ್ನು ಅವರ ಮಲತಾಯಿ ಎಂದು ಕರೆಯುವಂತೆ ಹೇಳುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ಟೀವನ್ ಮತ್ತು ಕೇಟ್ ವಿರುದ್ಧ ವಾರೆಂಟ್ ಜಾರಿಮಾಡಿದ್ದು, ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿರುವ ವಿಳಾಸದಲ್ಲಿ ಅವರನ್ನು ಪೋಲಿಸರು ಪತ್ತೆಹಚ್ಚಿದ್ದಾರೆ. ಅವರ ಜೊತೆಗೆ 4 ತಿಂಗಳು ಹಸುಗೂಸು ಇತ್ತು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
 
ಅಲ್ಲದೆ, ಅವರಿಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು ಜಾಮೀನಿಗಾಗಿ 1 ಮಿಲಿಯನ್ ಡಾಲರ್ ಬಾಂಡ್ ನೀಡಬೇಕು ಎಂದು ಕೋರ್ಟ್ ಹೇಳಿದೆ. ಈಗಾಗಲೇ ಸ್ಟೀವನ್ ಹಣವನ್ನು ಕೋರ್ಟ್‌ಗೆ ಪಾವತಿಸಿದ್ದು ಸ್ವೀವನ್ ಜೈಲಿನಿಂದ ಹೊರಬಂದಿದ್ದಾನೆ ಆದರೆ ಕೇಟ್ ಮಾತ್ರ ಇನ್ನೂ ಜೈಲಿನಲ್ಲೇ ಇದ್ದಾಳೆ ಎಂದು ಹೇಳಲಾಗುತ್ತಿದೆ.
 
ಒಟ್ಟಿನಲ್ಲಿ ಕಾಮಾತುರಂ ನಾ ಭಯಂ ನಾ ಲಜ್ಜಾ ಎನ್ನುವ ಮಾತು ಈ ಪ್ರಕರಣಕ್ಕೆ ಹೇಳಿ ಮಾಡಿಸಿದಂತಿದೆ ಎಂದರೆ ತಪ್ಪಾಗಲಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ