ಆಟೋ ಚಾಲಕರಿಗೆ ತಟ್ಟಿದ ಶಕ್ತಿ ಯೋಜನೆ ಬಿಸಿ

ಮಂಗಳವಾರ, 13 ಜೂನ್ 2023 (17:41 IST)
ಕಾಂಗ್ರೆಸ್​​ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯ ವಿರುದ್ಧ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮಹಿಳೆಯರಿಗೆ ನೀಡಿರುವ ಉಚಿತ ಬಸ್​ ಪ್ರಯಾಣದಿಂದಾಗಿ ಬಾಗಲಕೋಟೆಯಲ್ಲಿ ಆಟೋ ಚಾಲಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.. ಉಚಿತ ಪ್ರಯಾಣದಿಂದ ಮಹಿಳೆಯರು ಆಟೋದತ್ತ ಒಬ್ಬರೂ ಸುಳಿಯುತ್ತಿಲ್ಲ.. ಸಾಲ ಮಾಡಿ ಆಟೋ ಖರೀದಿಸಿ, ಆ ದುಡಿಮೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರ ಬರಿಸಲಿ. ಆಟೋ ನಂಬಿ ಜೀವನ ನಡೆಸುತ್ತಿರುವ ಬಡ ಚಾಲಕರ ಹೊಟ್ಟೆ ಮೇಲೆ ಸರ್ಕಾರ ಬರೆ ಎಳೆದಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ