ಶನಿದೇವರ ಪೂಜೆ ಬರ್ತಿದ್ದವರು ಶಿವನ ಪಾದ ಸೇರಿದ್ರು!

ಶನಿವಾರ, 24 ನವೆಂಬರ್ 2018 (19:21 IST)
ಅವರು ಮನೆಯಿಂದ ಶನಿದೇವರ ಪೂಜೆಗೆ ಎಂದು ಹೊರಟಿದ್ದರು. ಆದರೆ ಹೋಗಿ ಸೇರಿದ್ದು ಮಾತ್ರ ಶಿವನ ಪಾದಕ್ಕೆ. ಅರೇ ಇದೇನಿದು ದುರಂತ ಅಂತ ಕೇಳ್ತಿರಾ? ಮುಂದೆ ಓದಿ…

ಅವರು ಶನಿದೇವರ ಪೂಜೆಗೆ ಎಂದು ಪ್ರಯಾಣ ಆರಂಭಿಸಿದ್ರು. ಆದರೆ ವಿಧಿ ಅವರ ಬಾಳನ್ನು ಸೇರಿಸಿದ್ದೇ ಮತ್ತೊಂದು ಕಡೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಬಸ್ ದುರಂತದಲ್ಲಿ ಸಾವನ್ನಪ್ಪಿದ್ದ ಒಂದೇ ಕುಟುಂಬದವರ ಕಥೆ ಇದು.  

ಕನಗನಮರಡಿ ಬಸ್ ದುರಂತ ಪ್ರಕರಣದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ವದೇಸಮುದ್ರ ಗ್ರಾಮದ ರಾಧಾ(30), ಲಿಖಿತ(6), ರಾಧಾ ದೊಡ್ಡಮ್ಮ ಮಂಜುಳ(50) ಸಾವನ್ನಪ್ಪಿದ್ದಾರೆ.

ವದೇ ಸಮುದ್ರದ ತಂದೆ ಮನೆಯಲ್ಲಿ ನಡೆಯಬೇಕಿದ್ದ ಶನಿದೇವರ ಪೂಜೆಯಲ್ಲಿ ಪಾಲ್ಗೊಳ್ಳಲು ಇವರೆಲ್ಲ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಪಾಂಡವಪುರದಿಂದ ಗ್ರಾಮಕ್ಕೆ ಬರುತ್ತಿದ್ದ ಇವರೆಲ್ಲ ಬಸ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ