ಅಪ್ಪಿತಪ್ಪಿಯೂ ಈ ವೇಳೆ ಅರಳಿಮರಕ್ಕೆ ಪೂಜೆ ಮಾಡಬೇಡಿ. ಯಾಕೆ ಗೊತ್ತಾ?

ಮಂಗಳವಾರ, 20 ನವೆಂಬರ್ 2018 (15:07 IST)
ಬೆಂಗಳೂರು : ಪುರಾತನ ಕಾಲದಿಂದಲೂ ಅರಳಿ ಮರವನ್ನು ದೇವರೆಂದು ನಂಬಿ ಪೂಜೆ ಮಾಡುತ್ತಿದ್ದರು. ಅರಳಿ ಮರವನ್ನು ಸರ್ವದೇವರುಗಳ ವಾಸಸ್ಥಳ ಎಂದು ಕರೆಯುತ್ತಾರೆ. ಅದರ ಜೊತೆಗೆ ನಮ್ಮ ಪೂರ್ವಜರು ಕೂಡ ಇದರಲ್ಲಿ ವಾಸವಾಗಿರುತ್ತಾರೆ ಎಂದು ನಂಬಲಾಗಿದೆ. ಇಂತಹ ಅರಳಿ ಮರವನ್ನು  ಪೂಜಿಸಿದರೆ ಶುಭ ಎನ್ನುತ್ತಾರೆ. ಆದರೆ ಈ ವೇಳೆಗಳಲ್ಲಿ ಅರಳಿ ಮರವನ್ನು ಪೂಜೆ ಮಾಡಿದರೆ ಅಶುಭವಂತೆ.


ಹೌದು. ಶನಿವಾರ ಅರಳಿ ಮರದಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆಂಬ ನಂಬಿಕೆ ಇದೆ. ಈ ದಿನ ಅರಳಿ ಮರಕ್ಕೆ ನೀರು ಹಾಕುವುದು ಶುಭ. ಆದರೆ ಭಾನುವಾರ ಮಾತ್ರ ಅರಳಿ ಮರಕ್ಕೆ ನೀರು ಹಾಕಬಾರದಂತೆ. ಒಂದು ವೇಳೆ  ನೀರು ಹಾಕಿದರೆ ಬಡತನ ಆವರಿಸಲಿದೆ ಎಂದು ನಂಬಲಾಗಿದೆ. ಹಾಗೇ ಪಿತೃಗಳಿಗೆ ಇದರಿಂದ ತೊಂದರೆಯಾಗುವ ಜೊತೆಗೆ ವಂಶಾಭಿವೃದ್ಧಿ ಕಷ್ಟವಾಗುತ್ತದೆಯಂತೆ.


ಬ್ರಹ್ಮಮಹೂರ್ತದಲ್ಲಿ  ದೇವಸ್ಥಾನಕ್ಕೆ ಹೋದಾಗ ಅರಳಿ ಮರವನ್ನು ಪೂಜೆ ಮಾಡಬಾರದಂತೆ. ಸೂರ್ಯೋದಯದ ನಂತರವೇ ಅರಳಿ ಮರಕ್ಕೆ ಪೂಜೆ ಮಾಡಬೇಕಂತೆ. ಇದರಿಂದ ಮಹಾಲಕ್ಷ್ಮಿ ಪ್ರಸನ್ನಳಾಗಿ ಸದಾ ನಿಮ್ಮ ಬಳಿ ನೆಲೆಸಿರುತ್ತಾಳಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ