ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಮಹಿಳೆಯನ್ನು ಥಳಿಸಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆದ ಸುದ್ದಿ ಓದಿರುತ್ತೀರಿ.
ಎಎಸ್ ಐ ಅಶೋಕ್ ಕುಮಾರ್ ತೋಮರ್ ಎಂಬ ಪೊಲೀಸ್ ಅಧಿಕಾರಿಯ ಪುತ್ರ ರೋಹಿತ್ ತೋಮರ್ ಮಹಿಳೆ ಮೇಲೆ ಸ್ನೇಹಿತನ ಕಚೇರಿಯಲ್ಲಿ ಕಾಲಿನಿಂದ ತುಳಿದು ಥಳಿಸುತ್ತಿರುವ ವೈರಲ್ ಆಗಿತ್ತು. ಆ ಬಳಿಕ ಮಹಿಳೆ ರೋಹಿತ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದ ಎಂದೂ ಆರೋಪಿಸಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿತ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಇದೀಗ ಮಗ ಮಾಡಿದ ತಪ್ಪಿಗೆ ತಂದೆ ಅಶೋಕ್ ಕುಮಾರ್ ನೌಕರಿ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಕುಮಾರ್ ತಮ್ಮ ಪ್ರಭಾವ ಬಳಸಿ ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು ಎಂದೂ ಆರೋಪವಿದೆ.
ಇದರಿಂದಾಗಿ ಅಶೋಕ್ ಕುಮಾರ್ ಮೇಲೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಬಂಧಪಟ್ಟ ಇಲಾಖೆ ಸೂಚಿಸಿದ್ದರು. ಹೀಗಾಗಿ ಇದೀಗ ಅಶೋಕ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.