ಆನ್ ಲೈನ್ ಶಿಕ್ಷಣದ ವಿರುದ್ಧ ಸಿದ್ದರಾಮಯ್ಯ ಫುಲ್ ಗರಂ

ಮಂಗಳವಾರ, 9 ಜೂನ್ 2020 (20:33 IST)
ದುಡ್ಡು ಮಾಡುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಾಗಿ ಆನ್ ಲೈನ್ ಶಿಕ್ಷಣ ದಂಧೆಯಾಗುತ್ತಿದ್ದು, ಅದನ್ನು ನಿಲ್ಲಿಸಬೇಕೆಂದು ವಿಪಕ್ಷ ನಾಯಕ ಆಗ್ರಹ ಮಾಡಿದ್ದಾರೆ.

ಕೆಲವು ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಶಿಕ್ಷಣವನ್ನು ದುಡ್ಡು ಕಬಳಿಸುವ ದಂಧೆಯನ್ನಾಗಿ ಮಾಡಿಕೊಳ್ಳುತ್ತಿವೆ. ಇದಕ್ಕೆ ಅವಕಾಶ ಕೊಡಬಾರದು.

ಪ್ರಾಥಮಿಕ ಹಂತದಲ್ಲೇ ಶುರುವಾಗಿರುವ ಪಿಡುಗನ್ನು ಅಲ್ಲೇ ಕೊನೆಗಾಣಿಸಬೇಕು. ಇದಕ್ಕೆ ಸಚಿವ ಎಸ್.ಸುರೇಶ್ ಕುಮಾರ್ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಬಾಹಿರ ಬೋಧನಾ ಶುಲ್ಕ ಹೆಚ್ಚಿಸುತ್ತಿವೆ. ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ದೂರುಗಳು ಕೇಳಿಬರುತ್ತಿವೆ ಎಂದಿದ್ದಾರೆ ಸಿದ್ದರಾಮಯ್ಯ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ